ಭಾರತ, ಮಾರ್ಚ್ 8 -- ಮಹಿಳಾ ದಿನಾಚರಣೆಯ ಸಂದರ್ಭ ಮಹಿಳೆಯರ ಆರೋಗ್ಯದ ಬಗ್ಗೆಯೂ ಒಂದಿಷ್ಟು ಮಾತನಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವೊಂದು ರೋಗಗಳು ಯಾವುದೇ ಸೂಚನೆ ಕೊಡದೇ, ರೋಗ ಲಕ್ಷಣಗಳನ್ನು ತೋರಿಸದೇ ದೇಹದೊಳಗೆ ನುಸುಳುತ್ತವೆ. ಅವುಗಳನ್ನು ಗುರುತಿಸುವುದು ಕೂಡ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಆರಂಭಿಕ ಹಂತದಲ್ಲೇ ಅವುಗಳನ್ನು ಗುರುತಿಸದೇ ಇದ್ದಾಗ ರೋಗಗಳು ಸಂಕೀರ್ಣವಾಗುತ್ತವೆ.

ಶಾಲಿಮಾರ್ ಬಾಗ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಹಾಯಕ ನಿರ್ದೇಶಕಿ ಡಾ. ಸುನೀರ್ ಕೌರ್ ಮಲ್ಹೋತ್ರಾ ಸದ್ದಿಲ್ಲದೇ ಮಹಿಳೆಯರ ದೇಹ ಹೊಕ್ಕು ಗಂಭೀರವಾಗುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸಿದೇ ಇರುವ ಕೆಲವು ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳ ಆರಂಭಿಕ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

ಮಹಿಳೆಯರನ್ನು ಹೆಚ್ಚು ಕಾಡುವ, ಸದ್ದಿಲ್ಲದೇ ಗಂಭೀರವಾಗುವ ಕಾಯಿಲೆಗಳ ಬಗ್ಗೆ ವೈದ್ಯರು ಇಲ್ಲಿ ವಿವರಿಸಿದ್...