Bengaluru, ಮಾರ್ಚ್ 6 -- ಮಹಿಳೆಯರು ತಮ್ಮ ಇಡೀ ಜೀವನವನ್ನು ಮನೆಗೆಲಸದಲ್ಲಿ ಕಳೆಯುತ್ತಾರೆ. ಅವರು ಕೆಲಸ ಮಾಡುತ್ತಿರಲಿ ಅಥವಾ ಇಲ್ಲದಿರಲಿ, ಮನೆಯಲ್ಲಿ ಗಂಟೆಗಟ್ಟಲೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅವರ ಕಷ್ಟಗಳನ್ನು ಮನೆಯವರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಸರಾಸರಿ ಗೃಹಿಣಿ ದಿನಕ್ಕೆ ಏಳು ಗಂಟೆಗಳ ಕಾಲ ಮನೆಗೆಲಸದಲ್ಲಿ ಕಳೆಯುತ್ತಾರೆ ಎಂಬುದು ತಿಳಿದುಬಂದಿದೆ.

ಜನವರಿ 2024 ರಿಂದ ಡಿಸೆಂಬರ್ 2024 ರವರೆಗೆ ಭಾರತೀಯರು ಯಾವ ರೀತಿಯ ಚಟುವಟಿಕೆಗಳಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನವಾದ 'ಟೈಮ್ ಯೂಸ್ ಸರ್ವೇ' ಅನ್ನು ಅಂಕಿಅಂಶ ಸಚಿವಾಲಯ ಬಿಡುಗಡೆ ಮಾಡಿದೆ. ಸಮೀಕ್ಷೆಯು ನಿದ್ರೆ, ಊಟ ಮತ್ತು ವೈಯಕ್ತಿಕ ನೈರ್ಮಲ್ಯದಂತಹ ಸ್ವ-ಆರೈಕೆ ಚಟುವಟಿಕೆಗಳಿಂದ ಹಿಡಿದು ಮನರಂಜನೆ, ಸಾಮಾಜಿಕ ಚಟುವಟಿಕೆಗಳು ಮತ್ತು ಮನೆಕೆಲಸಗಳವರೆಗೆ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದೆ.

ಈ ಸಮೀಕ್ಷೆಯ ಪ್ರಕಾರ, ಭಾರತೀಯರು ತಮ್ಮ ಹೆಚ್ಚಿನ ಸಮಯವನ್ನು ಸ್ವ-ಆರೈಕೆಯಲ...