ಭಾರತ, ಮಾರ್ಚ್ 8 -- ಇಂದು ‌(ಮಾರ್ಚ್‌ 8) ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಸಾಧನೆಯನ್ನು ಸಂಭ್ರಮಿಸುವ ಹಾಗೂ ಸಮಾನತೆಯನ್ನು ಗೌರವಿಸುವ ದಿನವಾಗಿದೆ. ಈ ಬಾರಿ ವಿಶ್ವ ಮಹಿಳಾ ದಿನವನ್ನು ಮಹಿಳಾ ಸಮಾನತೆಯ ಥೀಮ್‌ನೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ. 2025ರ ಎಐ ಯುಗದಲ್ಲಿ ನಾವಿದ್ದರೂ, ಲಿಂಗ ಸಮಾನತೆಗಾಗಿ ಧ್ವನಿ ಎತ್ತಬೇಕಿರುವುದು, ಮಹಿಳಾ ದಿನಾಚರಣೆಯನ್ನು ಸಮಾನತೆಯ ಥೀಮ್‌ನೊಂದಿಗೆ ಆಚರಿಸುತ್ತಿರುವುದು ಖೇದಕರ. ಪುರುಷ ಪ್ರಧಾನ ಸಮಾಜ ಎಂಬ ಕಲ್ಪನೆ, ಇನ್ನೂ ವಾಸ್ತವದಲ್ಲಿ ರಾಜಾರೋಷವಾಗಿ ಕೂತಿದೆ. ಇದು ಕ್ರೀಡಾ ಕ್ಷೇತ್ರವನ್ನೂ ಬಿಟ್ಟಿಲ್ಲ.

ಈಗಲೂ ಒಂದು ಹಳ್ಳಿ ಕಡೆಗೆ ಹೋಗಿ ನೋಡಿ. ಹಳ್ಳಿಯೇ ಆಗಬೇಕೆಂದಿಲ್ಲ, ಅರೆನಗರ, ಪಟ್ಟಣ ಅಥವಾ ಕೆಲವು ನಗರಗಳಲ್ಲೂ, ಹೆಣ್ಣುಮಕ್ಕಳು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಒಂದು ಕೃತಕ ಗಡಿ ಹಾಕಲಾಗುತ್ತದೆ. ಕ್ರೀಡೆ ಎಂದರೆ ಗಂಡು ಮಕ್ಕಳಿಗೆ ಮಾತ್ರ ಎಂಬ ಕಲ್ಪನೆ ಇನ್ನೂ ಅಡಗಿದೆ. ಅಲ್ಲೋ ಇಲ್ಲೋ ಒಬ್ಬಿಬ್ಬರು ಸೀಮಿತ ಪ್ರಪಂಚದ ಗಡಿದಾಟಿ ಬಂದು ರಾಷ್ಟ್ರ ಅಂತಾರಾಷ್ಟ್ರೀ...