Bengaluru, ಫೆಬ್ರವರಿ 10 -- ಕಡಿಮೆ ತೂಕ ಹೊಂದಿರುವುದು ಮತ್ತು ಅತಿಯಾದ ದೇಹ ತೂಕ ಹೊಂದಿರುವುದು ಎರಡೂ ಕೂಡ ದೇಹಕ್ಕೆ ಒಳ್ಳೆಯದಲ್ಲ. ಅದನ್ನು ಸರಿದೂಗಿಸುವುದು ಮುಖ್ಯ. ಅದರಲ್ಲೂ ಮಹಿಳೆಯರು ತಮ್ಮ ದೇಹದ ತೂಕದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುತ್ತಾರೆ. ತೂಕ ಇಳಿಸಲು ನೀವು ಈವರೆಗೆ ಹಲವು ತಂತ್ರಗಳ ಮೊರೆ ಹೋಗಿರಬಹುದು. ಒಟ್ಟಿನಲ್ಲಿ ತೂಕ ಇಳಿಸಲು ಕಷ್ಟಪಡುವುದರಿಂದ ಹಿಡಿದು ಅದನ್ನು ಕಾಪಾಡಿಕೊಳ್ಳುವವರೆಗೆ, ತೂಕ ಇಳಿಸುವುದು ಎಂದರೆ ಸವಾಲಿನ ಕೆಲಸ. ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಇಂದು ಹಲವು ರೀತಿಯ ತೂಕ ಇಳಿಕೆಯ ಟಿಪ್ಸ್ ನೋಡುತ್ತೇವೆ. ಆದರೆ ಎಲ್ಲವನ್ನೂ ಹಾಗೆ ಪ್ರಯತ್ನಿಸುವುದು ಸರಿಯಲ್ಲ, ಅದರ ಬದಲು, ಸೂಕ್ತ ಫಲಿತಾಂಶ ನೀಡುವ, ಸರಳ ಆಹಾರ ಕ್ರಮ ಮತ್ತು ವ್ಯಾಯಾಮವನ್ನು ಮನೆಯಲ್ಲಿಯೇ ಮಾಡುವ ಮೂಲಕ, ತೂಕ ಇಳಿಸಿಕೊಳ್ಳಬಹುದು.

30 ಕೆಜಿ ತೂಕ ಇಳಿಸಿಕೊಳ್ಳಲು ನಾನೇನು ಮಾಡಿದೆ ಮತ್ತು ಹೇಗೆ ಅದನ್ನು ಅನುಷ್ಠಾನಕ್ಕೆ ತಂದೆ ಎಂದು ರಾಚೆಲ್ ಸಸೆರ್ಡೋಟಿ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದು ಸರಳ ಟಿಪ್ಸ್ ಹಂಚಿಕೊಂಡ...