Bengaluru, ಜನವರಿ 26 -- ಮಹಿಳೆ ಹಲವು ರೀತಿಯಲ್ಲಿ ಮನೆಯಲ್ಲಿ, ಕಚೇರಿಯಲ್ಲಿ ಸದಾ ಕೆಲಸದಲ್ಲಿ ಬ್ಯುಸಿಯಾಗಿರುವುದು ಸಾಮಾನ್ಯ. ಮನೆಯಲ್ಲಿದ್ದರೆ ಮನೆಯ ಕೆಲಸ, ಆಫೀಸ್‌ನಲ್ಲಿದ್ದರೆ ಆಫೀಸ್ ಕೆಲಸ ಜತೆಗೆ, ಮಕ್ಕಳು ಇದ್ದರಂತೂ ಅವರದ್ದೇ ನೂರಾರು ರಗಳೆಗಳು ಇರುತ್ತವೆ. ಅವೆಲ್ಲವನ್ನೂ ಮಹಿಳೆ ಸರಿದೂಗಿಸಿಕೊಂಡು, ಸುಸ್ತಾದರೂ ತೋರಿಸದೆ ಸಾಗುತ್ತಿರುತ್ತಾಳೆ. ಆದರೆ ನಿರಂತರ ಈ ರೀತಿಯ ಒತ್ತಡಕ್ಕೆ ಸಿಲುಕಿದರೆ, ಅದರಿಂದ ಮಾನಸಿಕವಾಗಿ ಹಲವು ಸಮಸ್ಯೆಗಳು ಬರುವ ಸಾಧ್ಯತೆಯಿದೆ.

ಮಹಿಳೆಯರು ಒತ್ತಡ ಮತ್ತು ಮಾನಸಿಕ ಕಿರಿಕಿರಿಯಿಂದ ಎದುರಿಸುವ ಸಮಸ್ಯೆಗಳು ಯಾವುವು? ಅದರಿಂದ ಹೊರಬರುವುದು ಹೇಗೆ ಎನ್ನುವ ಕುರಿತು ಮನಶಾಸ್ತ್ರಜ್ಞೆ ಡಾ. ಸ್ಮಿತಾ ಶ್ರೀವಾಸ್ತವ ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಸದಾ ಕಿರಿಕಿರಿಯಿಂದ ಕೂಡಿರುವ ಮನಸ್ಸಿಗೆ ಸಂತೋಷವಾಗುವ ಯಾವುದೇ ಕೆಲಸವಾದರೂ ಸರಿ, ಅದನ್ನು ಮಹಿಳೆಯರು ಮಾಡಬೇಕು. ಅದರಿಂದ ಅವರ ಮನಸ್ಸಿಗೆ ಸಂತೋಷ, ನೆಮ್ಮದಿ ದೊರೆಯುತ್ತದೆ ಎಂದಾದರೆ, ಅದಕ್ಕೆ ಸಮಯ ಕೊಡಬೇಕು. ಆ ಮೂಲಕ ಖುಷಿಯಿಂದ ಸಮಯ ಕಳೆಯ...