Bangalore, ಮಾರ್ಚ್ 10 -- ಬೆಂಗಳೂರು: ಕನ್ನಡ ಸಾಹಿತ್ಯದಲ್ಲಿ ರೋಮಾಂಚಕ ಸಾಹಿತ್ಯಕ್ಕೂ ಉಂಟು ಸ್ಥಾನ. ಅದರಲ್ಲೂ ಅರಣ್ಯ, ವನ್ಯಜೀವಿ, ಪ್ರಾಣಿ ಬೇಟೆಯಂತಯ ರೋಚಕ ಕಥಾನಕಗಳು ಐದಾರು ದಶಕದ ಹಿಂದೆಯೇ ಜನಪ್ರತಿಯವಾಗಿದ್ದವು. ಅದರಲ್ಲಿ ಮುಂಚೂಣಿ ಹೆಸರು ಕೆನ್ನತ್‌ ಅಂಡರ್ಸನ್‌. ಅವರ ಹೆಸರು ಕೇಳಿದರೆ ಯಾವುದೋ ದೂರದ ದೇಶದವರು ಇರಬೇಕು ಎನ್ನಿಸಿಬಿಡಬಹುದು. ಆದರೆ ಬಹುಪಾಲು ಜೀವನ ನಡೆದಿರುವುದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ. ಅವರು ಸಾಹಿತ್ಯದ ಹತ್ತಾರು ಕೃತಿಗಳು ಇಂಗ್ಲೀಷ್‌ನಲ್ಲಿ ಪ್ರಕಟಗೊಂಡಿವೆ. ಅವುಗಳನ್ನು ಕನ್ನಡಕ್ಕೆ ಪೂರ್ಣಚಂದ್ರ ತೇಜಸ್ವಿ ಸಹಿತ ಹಲವರು ಅನುವಾದಿಸಿ ಜನಮಾನಸಕ್ಕೆ ತಲುಪಿಸಿದ್ದಾರೆ.

ಕೆನ್ನೆತ್ ಆಂಡರ್ಸನ್ ಬೇಟೆಯ ಅನುಭವಗಳನ್ನು ರೋಮಾಂಚಕ ಸಾಹಿತ್ಯವನ್ನಾಗಿಸಿದವರು. ಜಿಮ್‍ಕಾರ್ಬೆಟ್, ಕೆನ್ನೆತ್ ಆಂಡರ್ಸನ್ ಮೊದಲಾದವರು ಮಾನವೀಯ ದೃಷ್ಟಿ ಮತ್ತು ಪರಿಸರ ಕಾಳಜಿಗಳಿಂದ ನರಭಕ್ಷಕ ಮೃಗಗಳನ್ನು ಮಾತ್ರ ಕೊಲ್ಲುವ ತತ್ತ್ವಕ್ಕೆ ಬದ್ಧರಾದ ನಿಪುಣ ಬೇಟೆಗಾರರಾಗಿದ್ದು ಅವರು ತಮ್ಮ ನೂರಾರು ಬೇಟೆ ಅನುಭವಗಳನ್ನು ಪುಸ...