Mysuru, ಮಾರ್ಚ್ 15 -- ಅಬ್ಬಬ್ಬಾ ಏನು ಬಿಸಿಲು ಎನ್ನುತ್ತಿದ್ದಾನೆ ಹುಲಿರಾಯ. ನೀರು ಸಿಕ್ಕರೆ ಅಷ್ಟೇ ಸಾಕು ಎಂದು ಹುಡುಕಿಕೊಂಡು ಬಂದು ದೇಹದ ಕಾವು ತಣಿಸಿಕೊಳ್ಳುತ್ತಿರುವ ಹುಲಿ.

ನೀರಿನಲ್ಲಿ ಕೆಲಹೊತ್ತು ಮಲಗಿ ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸಿದ ಹುಲಿ ರಾಯನಿಗೆ ಆ ಕೆರೆಯೇ ದಾಹ ತೀರಿಸುವ ಜಲದಾಣ.

ನಾಗರಹೊಳೆಯಲ್ಲಿ ಅಲ್ಲಲ್ಲೇ ಕೆರೆಗಳಲ್ಲಿ ನೀರು ಇದೆ. ಕೆಲವು ಕಡೆ ಅರಣ್ಯ ಇಲಾಖೆಯವರೆ ಟ್ಯಾಂಕರ್‌ ಮೂಲಕ ನೀರು ಹರಿಸುತ್ತಲೂ ಇದ್ದಾರೆ. ಇಂತಲ್ಲಿಗೆ ಹುಲಿ ಬಂದು ಕೆಲ ಹೊತ್ತು ಕಳೆದು ಹೋಗುತ್ತಿದೆ.

ಚಿರತೆಗೂ ಬಿಡಿದ ಚಿಂತೆ ಎನ್ನುವಂತೆ ನಾಗರಹೊಳೆಯಲ್ಲಿ ಚಿರತೆಯೊಂದು ಬಿಸಿಲಿನ ನಡುವೆ ಕಂಡದ್ದು ಹೀಗೆ.

ನಾಗರಹೊಳೆಯಲ್ಲಿ ಬಹಳಷ್ಟು ಕಡೆ ಮರಗಳು ಒಣಗಿ ವಸಂತ ಮಾಸದ ಆಗಮನದಂತೆ ಚಿಗುರು ಇನ್ನಷ್ಟೆ ಶುರುವಾಗುತ್ತಿದೆ. ಬಿಸಿಲ ನಡುವೆಯೆ ತಾಯಿ ಹಾಗೂ ಮರಿ ಆನೆಗಳ ಸಮಾಗಮವೂ ಆಯಿತು.

ನಾಗರಹೊಳೆಯ ಹಲವು ಭಾಗದಲ್ಲಿ ಬಿಸಿಲಿನಿಂದ ಹಸಿರು ಕಡಿಮೆಯಾಗಿದೆ. ಹುಲ್ಲೇ ಪ್ರಮುಖ ಆಹಾರ ಆಗಿರುವ ಆನೆಗಳು ಹುಡುಕಿಕೊಂಡು ಹೋಗುತ್ತವೆ. ...