Bengaluru, ಫೆಬ್ರವರಿ 13 -- ಸುಂದರವಾಗಿ ಕಾಣಿಸಬೇಕು, ತೂಕ ಹೆಚ್ಚಾಗಬಾರದು ಎನ್ನುವುದು ಈಗಿನ ಮಹಿಳೆಯರ ಅಭಿಲಾಷೆ. ತೂಕ ಸ್ವಲ್ಪ ಹೆಚ್ಚಾದರೂ ಅವರಿಗೆ ಚಿಂತೆ ಶುರುವಾಗುತ್ತದೆ. ಅಲ್ಲದೆ, ಒಮ್ಮೆ ತೂಕ ಇಳಿಸಿದರೆ ಸಾಕು ಎಂದು ಅವರು ಅಂದುಕೊಳ್ಳುತ್ತಾರೆ. ಆದರೂ ಕೆಲವೊಮ್ಮೆ ಇಷ್ಟದ ತಿಂಡಿ-ತಿನಿಸು ತಿಂದಾಗ, ವ್ಯಾಯಾಮ ಮರೆತಾಗ ತೂಕ ಏರಿಕೆಯಾಗುವುದು ಸಹಜ. ಹಾಗೆ ಏರಿಕೆಯಾದ ತೂಕವನ್ನು ಮನೆಯಲ್ಲೇ ಕೆಲವೊಂದು ಸರಳ ವ್ಯಾಯಾಮ, ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದು. ಜತೆಗೆ, ತೂಕ ಏರಿಕೆಯಾದ ಬಳಿಕ, ಅದನ್ನು ಇಳಿಸಿಕೊಂಡರೆ, ಹಾಗೆಯೇ ಉಳಿಸಿಕೊಳ್ಳುವುದು ಕೂಡ ಸವಾಲಿನ ಕೆಲಸ, ಅದಕ್ಕಾಗಿ ನೀವು ಪ್ರತಿದಿನ ಸ್ವಲ್ಪ ಸಮಯ ಮೀಸಲಿರಿಸಿದರೆ ಸಾಕು. ಸುಲಭದಲ್ಲೇ ತೂಕ ಇಳಿಸಿಕೊಂಡು, ಸುಂದರವಾಗಿ ಕಾಣಿಸಬಹುದು.

ಮಹ್ತಾಬ್ ಎಕೇ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಕಾರ, ಅವರು 3 ತಿಂಗಳಲ್ಲಿ 9 ಕಿಲೋ ತೂಕ ಇಳಿಸಿಕೊಂಡಿದ್ದಾರೆ. ಮಹ್ತಾಬ್ ಅವರು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ನಿಯಮಿತವಾಗಿ ತನ್ನ...