Bengaluru, ಮಾರ್ಚ್ 26 -- ನಮ್ಮ ದೇಶದಲ್ಲಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಬಹಳಷ್ಟು ಜನರಿದ್ದಾರೆ. ಕಳಪೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಬೊಜ್ಜು ಬರುವುದಕ್ಕೆ ಪ್ರಮುಖ ಕಾರಣಗಳಾಗಿವೆ. ವಿಶ್ವದಾದ್ಯಂತ ತೂಕ ಹೆಚ್ಚಳದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತೂಕ ಇಳಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ತಲೆಕೆಡಿಸಿಕೊಂಡವರ ಸಂಖ್ಯೆ ಬಹಳಷ್ಟಿದೆ. ತೂಕ ಇಳಿಸಿಕೊಳ್ಳಲು ಹರಸಾಹಸ ಪಡುವವರು ಇದ್ದಾರೆ. ಆದರೆ ಬಹಳಷ್ಟು ಜನರಿಗೆ ಫಲಿತಾಂಶ ಮಾತ್ರ ಶೂನ್ಯವಾಗಿರುತ್ತದೆ.

ತೂಕ ಇಳಿಸಿಕೊಳ್ಳಲು ಪ್ರತಿದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಅದಕ್ಕೆ ಸರಿಯಾದ ಆಹಾರ ಪದ್ಧತಿ ಮತ್ತು ನಿಯತ ವ್ಯಾಯಾಮವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಇವಿಷ್ಟು ಮಾಡಿದರೆ ಕೆಲವೊಮ್ಮೆ ತೂಕ ಇಳಿಯುವುದಿಲ್ಲ. ಅದಕ್ಕೆ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳು ಹಾಗೂ ಅಭ್ಯಾಸಗಳನ್ನು ಸೇರಿಸಿಕೊಳ್ಳುವ ಮೂಲಕ, ನಿಮ್ಮ ತೂಕ ಇಳಿಸ...