ಭಾರತ, ಮಾರ್ಚ್ 12 -- ಛಲವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರೇ ನಿದರ್ಶನ. ಬರೋಬ್ಬರಿ 96 ಕೆ.ಜಿ ತೂಕ ಹೊಂದಿದ್ದ ಈ ನಟಿ 46 ಕೆ.ಜಿ ತೂಕ ಇಳಿಸಿದ್ದಾದರೂ ಹೇಗೆ? ಅವರ ಈ ತೂಕ ಕಡಿಮೆ ಮಾಡಿಕೊಳ್ಳುವ ಜರ್ನಿ ಹೇಗಿತ್ತು? ಇದಕ್ಕೆ ಮುಖ್ಯ ಪ್ರೇರಣೆ ಏನು? ಎದುರಾದ ಸವಾಲುಗಳನ್ನು ಹೇಗೆ ಎದುರಿಸಿದರು ಎಂಬಿತ್ಯಾದಿ ವಿಚಾರಗಳ ಕುರಿತು ರಣವೀರ್ ಅಲ್ಲಾಬಾಡಿಯಾ ಅವರು ನಡೆಸಿದ ಸಂದರ್ಶನದಲ್ಲಿ ನಟಿ ಹಂಚಿಕೊಂಡಿದ್ದಾರೆ. ಸಾರಾ ಅಲಿ ಖಾನಾ ಅವರ ತೂಕ ಇಳಿಕೆ ಪ್ರಯಾಣ ಹೇಗಿತ್ತು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ತೂಕ ನಿಯಂತ್ರಿಸಲು ನಟಿ ಎಷ್ಟು ಸಮಯ ತೆಗೆದುಕೊಳ್ಳುತ್ತಿದ್ದರು ಅಥವಾ ಯಾವಾಗಲೂ ತೂಕ ಇಳಿಕೆಗೆ ಪಣತೊಡುತ್ತಿದ್ದರಾ ಎಂಬ ಪ್ರಶ್ನೆಗೆ ಸಾರಾ ಉತ್ತರ ತುಂಬಾ ಸರಳವಾಗಿದೆ. ತಾನು ಎಂದಿಗೂ ತೂಕ ಇಳಿಸಿಕೊಳ್ಳುತ್ತಿರಲಿಲ್ಲ. ಬದಲಾಗಿ ತೂಕದ ಮಾಪನವನ್ನೇ ಮುರಿದೆ ಎಂದು ತಿಳಿಸಿದ್ದಾರೆ. ಹಲವು ಬಾರಿ ನಮ್ಮ ಯೋಚನೆಗಳು ಸರಿಯಾಗಿ ಇರುವುದಿಲ್ಲ. ಬದಲಿಗೆ ನಮ್ಮ ಆಲೋಚನೆಯನ್ನೇ ಬ...