ಭಾರತ, ಏಪ್ರಿಲ್ 27 -- ಇತ್ತೀಚೆಗೆ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಬಹುತೇಕ ಮಂದಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬಹುತೇಕ ಮಂದಿ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ತೂಕವನ್ನು ಹೇಗೆ ಕಳೆದುಕೊಳ್ಳಬೇಕೆಂದು ಅವರಿಗೆ ತಿಳಿದಿಲ್ಲ. ತೂಕ ಇಳಿಸಿಕೊಳ್ಳಲು ನಿರ್ಧರಿಸಿದರೂ, ವ್ಯಾಯಾಮ ಮಾಡಲು ಸಮಯವಿಲ್ಲದ ಕಾರಣ ತೂಕ ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬೆಳಗ್ಗೆ ಕೇವಲ 7 ನಿಮಿಷ ಮೀಸಲಿಟ್ಟು ಈ ವ್ಯಾಯಾಮ ಮಾಡಬಹುದು. ಇದರಿಂದ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಬೆಳಗ್ಗೆ 7 ನಿಮಿಷಗಳ ಕಾಲ ಮಾತ್ರ ವ್ಯಾಯಾಮ ಮಾಡುವ ಮೂಲಕ ನೀವು ಸದೃಢರಾಗಿ ಉಳಿಯಬಹುದು. ಈ ವ್ಯಾಯಾಮಗಳನ್ನು ಮಾಡಿದರೆ, ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಿ ಬದಲಾವಣೆಗಳು ಕಂಡುಬರುತ್ತದೆ. ಈ ವ್ಯಾಯಾಮಗಳನ್ನು ಪ್ರತಿದಿನ ಬೆಳಗ್ಗೆ 7 ನಿಮಿಷಗಳಲ್ಲಿ ಮನೆಯ ಯಾವುದೇ ಮೂಲೆಯಲ್ಲಿ ಮಾಡಬಹುದು.

ಜಂಪಿಂಗ್ ಜಾಕ್: ನೀವು ಮನೆಯಲ್ಲಿ ಜಂಪಿಂಗ್ ಜಾಕ್ ವ್ಯಾಯಾಮವನ್ನು ಮಾಡಬಹುದು. ಫಿಟ್ನೆಸ್ ಪ್ರಯಾಣವನ್ನು ಪ್ರಾರಂಭಿಸಲು ಬಯಸಿದರೆ, ಈ ವ್ಯಾಯಾಮದೊ...