Bengaluru, ಏಪ್ರಿಲ್ 9 -- ತುಂಬಾ ದಪ್ಪವಿದ್ದ ಬಾಲಿವುಡ್ ನಟಿ ಸಾರಾ ಅಲಿ ಖಾನ್ ತೂಕ ಇಳಿಸಿಕೊಂಡಿದ್ದೇ ರೋಚಕ. ಹಾಲು, ಸಕ್ಕರೆಗೆ ಬಾಯ್ ಹೇಳಿ, ಕಡಿಮೆ ಕಾರ್ಬ್ ಹಾಗೂ ಹೆಚ್ಚಿನ ಪ್ರೋಟೀನ್ ಇರುವ ಡಯಟ್ ತೆಗೆದುಕೊಳ್ಳುವ ಮೂಲಕ ತಮ್ಮ ತೂಕ ಇಳಿಸಿಕೊಳ್ಳಲು ಪಣತೊಟ್ಟಿದ್ದರು. ನಿಜಕ್ಕೂ ಈ ರೀತಿಯಾಗಿ ತೂಕ ಇಳಿಸಿಕೊಳ್ಳುವುದು ಆರೋಗ್ಯಕರವೇ? ಅಥವಾ ಪರಿಣಾಮಕಾರಿಯೇ? ನಮ್ಮ ಜೀವನದಲ್ಲೂ ಇದನ್ನು ಅನುಸರಿಸಿಕೊಳ್ಳಬಹುದೇ? ಎಂಬಿತ್ಯಾದಿ ವಿಚಾರಗಳ ಕುರಿತು ಆಹಾರ ತಜ್ಞರು ಹೀಗೆ ವಿವರಿಸಿದ್ದಾರೆ.

ಸಿಒಡಿ ಕಾರಣದಿಂದ ಹೆಚ್ಚಾಗಿದ್ದ ದೇಹದ ತೂಕವನ್ನು ಕರಗಿಸಿ ಸ್ಲಿಮ್ ಅಂಡ್ ಫಿಟ್ ಆಗಿರುವ ಸಾರಾ ಅವರ ಈ ಜೀವನಶೈಲಿಯು ಅನೇಕರಿಗೆ ಸ್ಪೂರ್ತಿಯಾಗಿದೆ. 29 ವರ್ಷದ ಸಾರಾ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತನ್ನ ಆಹಾರ ಕ್ರಮದ ಕುರಿತು ಹೇಳಿದ್ದಾರೆ. ಹಾಲು, ಸಕ್ಕರೆಯುಳ್ಳ ಪದಾರ್ಥಗಳನ್ನು ಸೇವಿಸುವುದಿಲ್ಲ. ಕಡಿಮೆ-ಕಾರ್ಬ್, ಹೆಚ್ಚಿನ-ಪ್ರೋಟೀನ್ ಡಯಟ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಊಟಕ್ಕೆ ಕಾರ್ಬೋಹೈಡ್ರೇಟ್‌ ಒಳಗೊಂಡ ಆಹಾರವನ್...