Bengaluru, ಮಾರ್ಚ್ 27 -- ಇಷ್ಟಪಟ್ಟು ಖರೀದಿಸಿದ ಬಟ್ಟೆಗಳು ಈಗ ಫಿಟ್‌ ಆಗುತ್ತಿಲ್ಲ ಎಂದರೆ ಯಾರಿಗಾದರೂ ಬೇಸರವಾಗುವುದು ಸಹಜ. ಅದಕ್ಕೆಂದು ಊಟ ಬಿಟ್ಟು ಸಣ್ಣಗಾಗಲು ಪ್ರಯತ್ತಿಸುವವರಿದ್ದಾರೆ. ನೀವೂ ಕೂಡಾ ಅದೇ ರೀತಿ ಮಾಡುತ್ತಿದ್ದರೆ, ತಪ್ಪು ಮಾಡುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಪ್ರತಿಯೊಬ್ಬರ ದೇಹವು ನಿಸರ್ಗಕ್ಕೆ ಹೊಂದಿಕೊಳ್ಳಲು ಅದರದೇ ಆದ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡಿರುತ್ತದೆ. ತೂಕ ಇಳಿಸಿಕೊಳ್ಳಬೇಕೆಂದು ಊಟ ಬಿಟ್ಟು, ಹಸಿವಿನಿಂದ ಬಳಲಬೇಕು ಎಂದರ್ಥವಲ್ಲ. ನೀವು ವೃತ್ತಿಪರರಾಗಿದ್ದರೆ ನಿಮಗೆ ಹೆಚ್ಚಿನ ಪೌಷ್ಟಿಕ ಆಹಾರಗಳು, ಸರಿಯಾದ ದಿನಚರಿಯ ಅವಶ್ಯಕತೆಯಿರುತ್ತದೆ. ಹಾಗಿದ್ದಾಗ ಊಟ ಬಿಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕೇವಲ ತೂಕ ಇಳಿಸಿಕೊಳ್ಳುವುದೊಂದೇ ನಿಮ್ಮ ಗುರಿಯಾಗಿರಬಾರದು. ತೂಕ ಇಳಿಕೆಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಊಟವನ್ನು ಬಿಡುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂಬುದ...