ಭಾರತ, ಫೆಬ್ರವರಿ 22 -- ಕೆಲವರು ತೂಕ ಇಳಿಸಲು ಇಲ್ಲಸಲ್ಲದ ಪ್ರಯತ್ನಗಳನ್ನು ಪ್ರತಿನಿತ್ಯ ಮಾಡುತ್ತಲೇ ಇರುತ್ತಾರೆ. ಆದರೆ ಬದಲಾಗುತ್ತಿರುವ ಕಾಲಮಾನದಂತೆ ತೂಕ ಇಳಿಸುವುದು ಕೂಡ ಸಾಹಸವೇ ಹೌದು. ಅಲ್ಲದೆ ತೂಕ ಇಳಿಸಲು ಇಂದಿನ ದಿನಮಾನಗಳಲ್ಲಿ ಹಲವು ಮಾರ್ಗಗಳಿದ್ದು, ಅವುಗಳು ಆರೋಗ್ಯಕರವೆ ಅಥವಾ ಹಾನಿಕಾರಕವೆ ಎಂಬುದನ್ನು ತಿಳಿದು ನಾವು ಪ್ರಯತ್ನಿಸಬೇಕಷ್ಟೇ.

ತೂಕ ಇಳಿಕೆಗೆ ಆಹಾರ ಸೇವನೆಯ ನಿಯಂತ್ರಣವು ಅತ್ಯಂತ ಮುಖ್ಯವಾಗುತ್ತದೆ. ಹೀಗಾಗಿ ಸೆಲೆಬ್ರೆಟಿಗಳು ಕೂಡ ತೂಕ ಇಳಿಸಲು ತಜ್ಞರ ಸಲಹೆ ಪಡೆಯುತ್ತಾರೆ. ಸಾಮಾನ್ಯವಾಗಿ ತೂಕ ಇಳಿಸಬೇಕೆಂದರೆ ನೀವು ಎಷ್ಟು ತಿನ್ನುತ್ತೀರಿ ಎನ್ನುವುದು ಮುಖ್ಯವಲ್ಲ. ಬದಲಾಗಿ ನೀವೇನು ತಿನ್ನುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಹೆಚ್ಚಿನ ಆರೋಗ್ಯ ತಜ್ಞರು ಉತ್ತಮ ಪ್ರೋಟಿನ್‌ಯುಕ್ತ ಆಹಾರಗಳ ಸೇವನೆ ಮಾಡುವ ಮೂಲಕ ತೂಕ ಇಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಡಲೆಕಾಯಿ ಬೆಣ್ಣೆ: ಇದರಲ್ಲಿರುವ ಪ್ರೋಟಿನ್ ತೂಕ ನಿಯಂತ್ರಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ...