Bengaluru, ಮಾರ್ಚ್ 16 -- ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ಗ್ಯಾಜೆಟ್‌ಗಳಲ್ಲಿ ವಾಟರ್ ಕೂಲರ್ ಕೂಡ ಒಂದು. ನೀರನ್ನು ಬಿಸಿ ಮಾಡುವ ಮತ್ತು ತಂಪು ಮಾಡುವ ಆಯ್ಕೆಗಳನ್ನು ವಾಟರ್ ಕೂಲರ್ ನೀಡುತ್ತದೆ. ಹೀಗಾಗಿ ವಾಟರ್ ಕೂಲರ್‌ಗಳಿಗೆ ಡಿಮ್ಯಾಂಡ್ ಹೆಚ್ಚು. ವಾಟರ್ ಕೂಲರ್ ಖರೀದಿಸಿದರೆ ಹಲವು ಪ್ರಯೋಜನಗಳಿವೆ, ಅದರಲ್ಲೂ ಈಗ ಬಹುಆಯ್ಕೆಯ ಕೂಲರ್ ಲಭ್ಯವಾಗುವುದರಿಂದ ಹೆಚ್ಚಿನ ಮನೆ, ಆಫೀಸ್‌ಗಳಲ್ಲಿ ವಾಟರ್ ಕೂಲರ್ ಇರುತ್ತದೆ. ನೀರು ನಮಗೆ ಬಹಳ ಅಮೂಲ್ಯ. ನೀರಿನಿಂದಲೇ ಆರೋಗ್ಯ, ನೀರು ಮಲಿನವಾದರೆ ಅದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಕುಡಿಯುವ ನೀರು, ಅಡುಗೆಗೆ ಬಳಸುವ ನೀರಿನ ಕುರಿತು ಎಚ್ಚರಿಕೆ ವಹಿಸಬೇಕು.

ಈಗ ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಾಟರ್ ಕೂಲರ್‌ಗಳಲ್ಲಿ ಬಹು ವಿಧ ಕಾರ್ಯಗಳು, ಆಯ್ಕೆಗಳು ಕೂಡ ಇವೆ. ನೀರನ್ನು ತಂಪು ಮಾಡುವುದು ಮತ್ತು ಬಿಸಿ ಮಾಡುವುದು ಮಾತ್ರವಲ್ಲದೇ, ಅದನ್ನು ಶುದ್ಧೀಕರಿಸಿ ನೀಡುವ ಆಯ್ಕೆಯೂ ದೊರೆಯುತ್ತದೆ. ಹೀಗಾಗಿ ಬಳಕೆದಾರರು ಹೊಸ ವಾಟರ್ ಕೂಲರ್ ಖರೀದಿಸು...