ಭಾರತ, ಮಾರ್ಚ್ 11 -- ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಜೊತೆಯಾಗಿ ಅಭಿನಯಿಸುತ್ತಿರುವ ಆಕ್ಷನ್ ಸಿನಿಮಾ 'ವಾರ್ 2' . ಆದರೆ ಸಿನಿಮಾದ ಕಲವು ಸೀನ್‌ ಪೂರ್ವಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಹೃತಿಕ್ ರೋಷನ್ ಗಾಯಗೊಂಡಿದ್ದಾರೆ. ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ವಾರ್ 2 ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಹೃತಿಕ್ ರೋಷನ್ ಅವರಿಗಾದ ಗಾಯ ಗುಣವಾಗಲು ಎಷ್ಟು ದಿನಗಳು ಬೇಕು? ಅವರು ಚಿತ್ರೀಕರಣಕ್ಕೆ ಬರಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಗಳು ಮೂಡಿದೆ.

ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಕೂಡ ನಟಿಸಿದ್ದಾರೆ. ಕೆಲವು ಸ್ಟಾರ್ ಹಾಗೂ ಕೆಲವು ಸಿನಿಮಾಗಳ ಹೆಸರು ಕೇಳಿದ ತಕ್ಷಣವೇ ಆ ಸಿನಿಮಾದ ಬಗ್ಗೆ ನಿರೀಕ್ಷೆ ಆರಂಭವಾಗುತ್ತದೆ. ಅದೇ ರೀತಿ ವಾರ್ 2 ಸಿನಿಮಾದ ಕುರಿತು ಸಾಕಷ್ಟು ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಯಾವಾಗ ಖುಷಿ ಸುದ್ದಿಯನ್ನು ಹಂಚಿಕೊಳ್ಳುತ್ತದೆ ಎಂದು ಕಾಯುತ್ತಿದ್ದವರಿಗೆ ಇ...