Bengaluru, ಫೆಬ್ರವರಿ 14 -- ನಡಿಗೆಯಿಂದ ನಿಮ್ಮ ಆರೋಗ್ಯದಲ್ಲಿ ಏನೆಲ್ಲಾ ಸುಧಾರಣೆಗಳಾಗುತ್ತವೆ, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಅರೋಗ್ಯ ಮತ್ತು ಫಿಟ್ ನೆಸ್ ಅನ್ನು ಕಾಪಾಡಿಕೊಳ್ಳಲು ಇದೊಂದು ಅತ್ಯುತ್ತಮ ವ್ಯಾಯಾಮ ಎನ್ನುವುದು ವೈದ್ಯರ ಅಭಿಪ್ರಾಯ. ನಡಿಗೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸರಳವಾದ ಅತ್ಯಂತ ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ, ಇದಕ್ಕೆ ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಜೊತೆಗೆ ಸುಲಭ ಮತ್ತು ಸರಳ ಕೂಡ. ಪ್ರತಿದಿನ ನಡೆಯುವುದರಿಂದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ ಎನ್ನುವುದು ನಿಮಗೆ ಗೊತ್ತಾ? ದಿನಕ್ಕೆ 30 ನಿಮಿಷಗಳ ವಾಕಿಂಗ್ ನಿಮಗೆ ಹೇಗೆಲ್ಲಾ ಸಹಾಯ ಮಾಡುತ್ತದೆ ಎನ್ನುವುದು ತಿಳಿದಿದೆಯಾ? ನಡಿಗೆಯಿಂದ ದೇಹದಲ್ಲಿ ಯಾವೆಲ್ಲಾ ಒಳ್ಳೆಯ ಬದಲಾವಣೆಗಳು ಆಗಬಹುದು? ಅದರ ಬಗ್ಗೆ ತಜ್ಞರೇ ಮಾಹಿತಿ ನೀಡಿದ್ದಾರೆ ಕೇಳಿ.

ಹೈದರಾಬಾದ್‌‌ನ ಅಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ.ಸುಧೀರ್ ಕುಮಾರ್ ಅವರ ಪ್ರಕಾರ, ಪ್ರತಿದಿನದ 30 ನಿಮ...