ಭಾರತ, ಮಾರ್ಚ್ 12 -- What is Vitamin Patches: ಮನುಷ್ಯ ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ ಎದುರಾದರೆ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸುವುದು ಸಹಜ. ವಿಟಮಿನ್‌, ಮಿನರಲ್ಸ್‌, ಕಬ್ಬಿಣಾಂಶ ಈ ಎಲ್ಲವೂ ನಮ್ಮ ದೇಹಕ್ಕೆ ಅಗತ್ಯ. ವಿಟಮಿನ್‌ಗಳ ಕೊರತೆಯಾದರೆ ಅದನ್ನು ಪೂರೈಸಲು ಔಷಧಿಗಳು ಹಾಗೂ ಸೂಕ್ತ ಆಹಾರಗಳನ್ನು ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ವಿಟಮಿನ್ ಪ್ಯಾಚ್‌ಗಳು ಟ್ರೆಂಡ್ ಆಗುತ್ತಿವೆ. ಹಾಗಾದರೆ ಏನಿದು ವಿಟಮಿನ್ ಪ್ಯಾಚ್, ಇದರ ಪ್ರಯೋಜನಗಳೇನು ಎಂಬ ವಿವರ ಇಲ್ಲಿದೆ.

ವಿಟಮಿನ್ ಪ್ಯಾಚ್‌ಗಳನ್ನು ಚರ್ಮದ ಮೂಲಕ ನೇರವಾಗಿ ರಕ್ತಪ್ರವಾಹಕ್ಕೆ ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ನೋವು ನಿವಾರಕ ಅಥವಾ ನಿಕೋಟಿನ್‌ಗೆ ಹೋಲುತ್ತದೆ. ಇವು ಚರ್ಮಕ್ಕೆ ಅಂಟಿಸಿಕೊಳ್ಳಬಹುದಾದ ಪ್ಯಾಚ್‌ಗಳಾಗಿವೆ. ಸಾಮಾನ್ಯವಾಗಿ ತೋಳು, ಹೊಟ್ಟೆ ಅಥವಾ ತೊಡೆಯ ಭಾಗಕ್ಕೆ ಅಂಟಿಸಿಕೊಳ್ಳಬಹುದು. ಈ ಪ್ಯಾಚ್‌ಗಳು ಜೀರ್ಣಾಂಗ ವ್ಯವಸ್ಥೆಯನ್ನು ಬೈಪಾಸ್ ಮಾಡುತ್ತವೆ ಮತ್ತು ಉತ್ತಮ ಪೋಷಕಾಂಶ ಹೀರಿಕೊಳ್ಳುವಿಕೆಗೆ ಕಾರಣವಾಗುತ್ತ...