Bangalore, ಮಾರ್ಚ್ 10 -- ಕೆಲವರನ್ನೂ ಮೊದಲಿನಿಂದ ನೋಡಿಕೊಂಡ ಬಂದ ರೂಪದಲ್ಲಿ ನೋಡಿದರೆ ಥಟ್ಟನೇ ಅವರ ವ್ಯಕ್ತಿ ಚಿತ್ರ ಕಣ್ಣ ಮುಂದೆ ಬಂದು ಬಿಡಬಹುದು. ಅದೇ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡರೆ ಅದು ಖಂಡಿತಾ ಆಸಕ್ತಿಯನ್ನು ಹುಟ್ಟಿಸಬಹುದು. ಕರ್ನಾಟಕದಲ್ಲಿ ಅಂತಹುದ್ದೇ ಒಂದು ಸನ್ನಿವೇಶ ಎದುರಾಗಿದೆ. ಕರ್ನಾಟಕದ ಲೇಡಿ ಬಾಡಿ ಬಿಲ್ಡರ್‌ ಒಬ್ಬರು ವಧುವಿನ ಡ್ರೆಸ್‌ ಹಾಕಿಕೊಂಡು ಕಾಣಿಸಿಕೊಂಡಿರುವ ವಿಡಿಯೋವೊಂದು ಭಾರೀ ವೈರಲ್‌ ಆಗಿದೆ. ಅದು ಅವರ ಅಭಿಮಾನಿಗಳಿಗೆ ಅಚ್ಚರಿಯೂ ಆಗಿದೆ. ವಿಡಿಯೋವನ್ನು ಗಮನಿಸಿದ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಆತ್ಮವಿಶ್ವಾಸ ತುಂಬುವ ವಿಡಿಯೋ ಎನ್ನುವ ಖುಷಿಯನ್ನು ವ್ಯಕ್ತಪಡಿಸಿರುವುದ ಕಂಡು ಬಂದಿದೆ.

ಕರ್ನಾಟಕ ಮೂಲದ ಬಾಡಿಬಿಲ್ಡರ್ ಮತ್ತು ಫಿಟ್ನೆಸ್ ತರಬೇತುದಾರರಾದ ಚಿತ್ರ ಪುರುಷೋತ್ತಮ್‌ ಅವರು ವಧುವಿನ ಲುಕ್‌ ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿರುವುದು ಅಂತರ್ಜಾಲದ ಮೂಲಕ ಭಾರೀ ಗಮನ ಸೆಳೆದಿದ್ದಾರೆ. ವಿಡಿಯೋವನ್ನು ವೀಕ್ಷಿಸಿದವರು ಆರಂಭದಲ್ಲಿ ಚಿತ್ರಾ ಪುರುಷೋತ...