Puttur, ಫೆಬ್ರವರಿ 17 -- ಮಂಗಳೂರು: ಸುಮಾರು 45 ವರ್ಷಗಳ ಹಿಂದೆ ಮನೆ ಬಿಟ್ಟು ಉದ್ಯೋಗ ಅರಸುತ್ತಾ ಸಾಗಿದ ವ್ಯಕ್ತಿಯೋರ್ವರು ಕುಟುಂಬದಿಂದ ಸುದೀರ್ಘ ಕಾಲ ಸಂಪರ್ಕವನ್ನೇ ಕಡಿದು ಏಕಾಂಗಿಯಾಗಿದ್ದರೂ ಬಾಳ ಮುಸ್ಸಂಜೆಯಲ್ಲಿ ವಿಡಿಯೋ ತುಣುಕಿನ ಸಹಾಯದಿಂದ ಮನೆಗೆ ಮರಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಕೆಲಸಗಳೂ ಆಗುತ್ತವೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ. ಆಸೆಯೇ ಬಿಟ್ಟಿದ್ದ ಕುಟುಂಬದ ಸದಸ್ಯ ಬೆಂಗಳೂರಿನ ಆಸರೆ ಸಂಸ್ಥೆಯಲ್ಲಿರುವುದು ಗೊತ್ತಾಗಿ ಈಗ ಅವರನ್ನು ಕರೆತರಲಾಗಿದೆ. ಮನೆ ಮಂದಿಯ ಖುಷಿಗೆ ಎಲ್ಲೆಯೇ ಇಲ್ಲದಂತಾಗಿದೆ. ಪುತ್ತೂರು ತಾಲೂಕು ಕೈಯೂರು ಗ್ರಾಮದ ದೇರ್ಲ ರಾಮಣ್ಣ ರೈ ಬೊಳಿಕಲ ಪರಮೇಶ್ವರಿ ದಂಪತಿಯ ಪುತ್ರ ರಾಮಚಂದ್ರ ರೈ (65 ) ಸುಮಾರು 45 ವರ್ಷಗಳ ಹಿಂದೆ ಊರು ಬಿಟ್ಟಿದ್ದರು. ಮಗ ಎಲ್ಲಿದ್ದಾನೆ ಎಂಬುದೇ ಅಪ್ಪ, ಅಮ್ಮನಿಗೆ ಗೊತ್ತಿಲ್ಲದೆ ವರ್ಷಗಳೇ ಉರುಳಿದವು. ಕಳೆದು ಹೋದ ಮಗನ ನೆನಪಿನಲ್ಲೇ ಅಪ್ಪ, ಅಮ್ಮನೂ ಗತಿಸಿದರು.

ರಾಮಣ್ಣ ರೈಗಳು ಹೀಗೆ ಊರೂರು ಸುತ್ತುತ್ತಾ, ಸಣ್ಣ ಪುಟ್ಟ ಉದ್ಯೋಗ ಮಾಡುತ್ತಾ ವರ್ಷಗ...