Bangalore, ಮಾರ್ಚ್ 13 -- Dosa Idli Sambar Chutney Chutney Song: ಸೋಷಿಯಲ್‌ ಮೀಡಿಯಾದಲ್ಲಿ ದೋಸಾ ಇಡ್ಲಿ ಸಾಂಬಾರ್‌ ಚಟ್ನಿ ಚಟ್ನಿ... ಎಂಬ ಹಾಡೊಂದು ವೈರಲ್‌ ಆಗಿದೆ. ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು, ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಈ ಹಾಡಿಗೆ ರೀಲ್ಸ್‌ ಮಾಡುತ್ತಿದ್ದಾರೆ. ಹಿಂದೊಮ್ಮೆ ಕರ್ನಾಟಕದಲ್ಲಿ ನಾನೂ ನಂದಿನಿ ಬೆಂಗಳೂರಿಗೆ ಬಂದಿನಿ ಎಂಬ ಹಾಡು ವೈರಲ್‌ ಆದಂತೆ , ಬೆಳ್ಳುಳ್ಳಿ ಕಬಾಬ್‌ ವೈರಲ್‌ ಆದಂತೆ ಈ "ದೋಸಾ ಇಡ್ಲಿ ಸಾಂಬಾರ್‌.. ಚಟ್ನಿ ಚಟ್ನಿ" ಹಾಡು ವೈರಲ್‌ ಆಗುತ್ತಿದೆ.

ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ, ಸಾಂಬಾರ್‌, ಚಟ್ನಿ ಸಖತ್‌ ಫೇಮಸ್‌. ದೋಸೆಯನ್ನು ಸಾಂಬಾರ್‌ನಲ್ಲಿ ತಿಂದರೆ ಮಸ್ತ್‌ ಇರುತ್ತದೆ. ಅದೇ ರೀತಿ ಚಟ್ನಿಯಲ್ಲಿ ತಿಂದರೂ ಸೂಪರ್‌ ಇರುತ್ತದೆ. ದೋಸೆಯ ಜತೆಗೆ ಸಾಂಬಾರ್‌ ಮತ್ತು ಚಟ್ನಿ ಎರಡೂ ದೊರಕಿದರೆ ಪರಮಾನಂದ. ಅದೇ ರೀತಿ, ಇಡ್ಲಿಗೂ ಚಟ್ನಿ ಅಥವಾ ಸಾಂಬಾರ್‌ ಸೂಪರ್‌ ಕಾಂಬಿನೇಷನ್‌. ಚಟ್ನಿ ಮತ್ತು ಸಾಂಬಾರ್‌ ಎರಡೂ ಇದ್ದಾಗ ಇಡ್ಲಿ ಸವಿಯುವ ಸೊ...