Usa, ಮಾರ್ಚ್ 6 -- Viral News: ಆತ ಅಮೆರಿಕಾದ ಪ್ರಸಿದ್ದ ಹಾಗೂ ಅತ್ಯಂತ ದುಬಾರಿ ಆಭರಣಗಳ ಸಂಗ್ರಹ ಇರುವ ಚಿನ್ನಾಭರಣ ಮಳಿಗೆಗೆ ಬಂದಿದ್ದ. ಅಲ್ಲಿ ಬಗೆಬಗೆಯ ವಜ್ರದ ಆಭರಣಗಳನ್ನು ತೋರಿಸುವಂತೆ ಹೇಳಿದ. ಪ್ರಖ್ಯಾತ ಸಂಸ್ಥೆಯೊಂದರ ಪ್ರತಿನಿಧಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದರಿಂದ ವಿಐಪಿಯಂತೆ ಆತನಿಗೆ ಗೌರವ ನೀಡಿದ ಸಿಬ್ಬಂದಿ ಹೆಚ್ಚು ಬೆಲೆ ಬಾಳುವ ಆಭರಣಗಳನ್ನು ತೋರಿಸುತ್ತಿದ್ದರು. ಸಾಕಷ್ಟು ವಿನ್ಯಾಸದ ಆಭರಣಗಳನ್ನು ನೋಡಿದ ಆತನಿಗೆ ಸಮಾಧಾನವಾಗಲಿಲ್ಲ. ಇನ್ನಷ್ಟು ಆಭರಣ ತೋರಿಸುವಂತೆ ಹೇಳುತ್ತಲೇ ಇದ್ದ. ಕೆಲವೇ ಕ್ಷಣದಲ್ಲಿ ಎರಡು ಜೋಡಿ ವಜ್ರದ ಓಲೆಗಳನ್ನು ಆತ ತೆಗೆದುಕೊಂಡು ಅಲ್ಲಿಂದ ಓಡತೊಡಗಿದ. ಪೊಲೀಸರು, ಚಿನ್ನಾಭರಣದ ಅಂಗಡಿ ಪ್ರತಿನಿಧಿಗಳು ಆತನನ್ನು ದೂರದಲ್ಲಿ ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ ಆತನ ಬಳಿ ಆಭರಣ ಇರಲಿಲ್ಲ. ಆಭರಣ ನುಂಗಿದ್ದು ಆನಂತರ ಬಯಲಾಯಿತು. ಅವುಗಳ ಮೌಲ್ಯ ಬರೋಬ್ಬರಿ 6. 7 ಕೋಟಿ ರೂ.

Published by HT Digital Content Services with permission from HT Kannada....