ಭಾರತ, ಏಪ್ರಿಲ್ 6 -- ಮಹಾರಾಷ್ಟ್ರ: ಕಾಗೆ ಕಾವ್ ಕಾವ್‌ ಎಂದು ತನ್ನದೇ ಆದ ಧ್ವನಿಯಿಂದ ಕೂಗುವುದು ಸರ್ವೇಸಾಮಾನ್ಯ. ಆದರೆ, ಮಹಾರಾಷ್ಟ್ರದಲ್ಲೊಂದು ಕಾಗೆ ಮನುಷ್ಯನಂತೆಯೇ ಮಾತನಾಡಲು ಕಲಿತಿದೆ. ಗಿಣಿಗಳು ಈ ರೀತಿ ಮಾತನಾಡುವುದು ಅಷ್ಟೇನು ವಿಶೇಷ ಎಂದೆನಿಸುವುದಿಲ್ಲ. ಆದರೆ, ಮಹಾರಾಷ್ಟ್ರದ ಪಾಲ್ಘರ್‌ನ ಹಳ್ಳಿಯೊಂದರ ಕಾಗೆಯೊಂದು ಮನುಷ್ಯರಂತೆ ಮಾತನಾಡುವ ಸಾಮರ್ಥ್ಯ ಹೊಂದಿದೆ. ಇದು ಎಲ್ಲರಿಗೂ ಆಶ್ಚರ್ಯವುಂಟು ಮಾಡಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಪಕ್ಷಿಗಳಲ್ಲಿ ಗಿಣಿ ತುಂಬಾ ಚುರುಕು ಎಂದುಕೊಂಡಿದ್ದೆವು ಆದರೆ, ಕಾಗೆ ಅದಕ್ಕಿಂತಲೂ ಚುರುಕು ಎಂದು ವಿಡಿಯೋ ನೋಡಿದ ನೆಟ್ಟಿಗರು ಹೇಳುತ್ತಿದ್ದಾರೆ.

ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಈ ಕಾಗೆ ಪ್ರಮುಖ ಆಕರ್ಷಣೆಯಾಗಿದೆ. ಸ್ಪಷ್ಟವಾಗಿ ಪದಗಳನ್ನು ಉಚ್ಚಾರ ಮಾಡುತ್ತದೆ. ಈ ಕಾಗೆ ಮನುಷ್ಯರಂತೆ ಮಾತನಾಡಬಲ್ಲದು. ಗಿಣಿಗಳು ಮನುಷ್ಯರನ್ನು ಅನುಕರಿಸಿ ಮಾತನಾಡುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಕಾಗೆ ಮಾತನಾಡುವುದನ್ನು ನೋಡುವುದು ಬಲು ಅಪರೂಪ. ಆ ಕಾರಣಕ್ಕಾಗಿಯೇ ಈ ವಿಡ...