ಭಾರತ, ಮಾರ್ಚ್ 23 -- ಇತ್ತೀಚಿನ ದಿನಗಳಲ್ಲಿ ರ‍್ಯಾಂಕ್ ಗಳಿಸುವವರ ಸಂಖ್ಯೆ ಹೆಚ್ಚಾಗಿದೆ. ಯಾರ ಬಾಯಲ್ಲಿ ಕೇಳಿದರೂ ನನ್ನ ಮಗ 96%, ನನ್ನ ಮಗಳು 98% ಎಂದು ಹೇಳುತ್ತಾರೆ. ಆದರೆ ಹಗಲು ರಾತ್ರಿ ಶಾಲೆ, ಟ್ಯೂಷನ್‌, ಮನೆ ಎಂದು ಓದುವ ಮಕ್ಕಳಲ್ಲಿ ಸಾಮಾನ್ಯಜ್ಞಾನ ಎಷ್ಟಿದೆ ಎಂದು ಪರೀಕ್ಷೆ ಮಾಡಲು ಹೊರಟರೆ ಖಂಡಿತ ದಿಗ್ಭ್ರಮೆಯಾಗುತ್ತೆ, ಹಾಗಂತ ಎಲ್ಲಾ ಮಕ್ಕಳ ಹೀಗೆ ಇರುತ್ತಾರೆ ಎಂದಲ್ಲ. ಕೆಲವರು ಓದಿನೊಂದಿಗೆ ಸಾಮಾನ್ಯಜ್ಞಾನವನ್ನೂ ಬೆಳೆಸಿಕೊಳ್ಳುತ್ತಾರೆ. ಅದೆಲ್ಲಾ ಸರಿ, ಈ ಮಾತು ಈಗ್ಯಾಕೆ ಅಂತಿದ್ದೀರಾ? ಖಂಡಿತ ವಿಷಯ ಇದೆ.

ಬೆಂಗಳೂರು ಮೂಲದ ಸಿಇಒ ಒಬ್ಬರು ಲಿಂಕ್ಡ್‌ಇನ್‌ನಲ್ಲಿ ಹೇಳಿರುವ ವಿಚಾರ ಈಗ ಚರ್ಚೆ ಹುಟ್ಟು ಹಾಕಿದೆ. ಝಡ್ ಜನರೇಷನ್‌ನ ಸಾಮರ್ಥ್ಯದ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಜನರೇಷನ್‌ನವರಿಗೆ ಮೂಲಭೂತ ಸಮಸ್ಯೆ ಪರಿಹರಿಸುವ ಗುಣ ಹಾಗೂ ಹಣಕಾಸಿನ ಸಾಕ್ಷರತಾ ಕೌಶಲವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಸಿಇಓ ಆಶಿಷ್ ಗುಪ್ತಾ ತಮ್ಮ ಲಿಂಕ್ಡ್‌ಇನ್‌ ಪ್ರೊಫೈಲ್‌ನಲ್ಲಿ ಸ್ಟೇಟಸ್‌ವೊಂದನ್ನು ಪೋ...