Vijayapura, ಫೆಬ್ರವರಿ 23 -- ವಿಜಯಪುರ: ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಕುರಿತು ದೆಹಲಿ ಮೂಲದ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಸ್ಮ್‌ (ಎಡಿಆರ್) ನೀಡಿರುವ ವರದಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಸಂಸದ ರಮೇಶ ಜಿಗಜಿಣಗಿ ಅವರ ಆಸ್ತಿಯಲ್ಲಿ ಹಲವು ಪಟ್ಟು ಏರಿಕೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಹುಟ್ಟು ಹಾಕಿದೆ. ಅಸೋಸಿಯೇಶನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿರುವ ವರದಿಯಿಂದ ಸಂಸದರ ಆಸ್ತಿಯಲ್ಲಿ ಹಲವುಪಟ್ಟು ಏರಿಕೆಯಾಗಿರುವ ಕುರಿತು ದಾಖಲೆ ಇದೆ. 2004 ರಲ್ಲಿ ಇದ್ದ ಆಸ್ತಿಗೂ ಹಾಗೂ 2019ರವರೆಗೆ ಇರುವ ಆಸ್ತಿಗೆ ಹೋಲಿಕೆ ಮಾಡಿ ನೋಡಿದಾಗ ಸುಮಾರು ಶೇ. 9198.3 ಏರಿಕೆಯಾಗಿರುವುದು ಕಂಡು ಬಂದಿದೆ.

ಇದನ್ನೂ ಓದಿರಿ: Lok Sabha Elections 2024: ಮಂಡ್ಯ ಟಿಕೆಟ್‌ಗೆ ಕುಮಾರಸ್ವಾಮಿ- ಸುಮಲತಾ ಜಿದ್ದಾಜಿದ್ದಿ, ಮರುಕಳಿಸುವುದೇ 2019ರ ಸನ್ನಿವೇಶ

ಚಿಕ್ಕೋಡಿ ಕೇತ್ರದಲ್ಲಿ ಮೂರು ಬಾರಿ ಸಂಸದರಾಗಿ, ಆನಂತರ ವಿಜಯಪುರ ಕ್ಷೇತ್ರವನ್ನು ಸತತ ಮೂರು ಪ್ರತಿನಿಧಿಸುವುದೂ ಸೇರಿ ಸತತ ಆರು ...