Vijayapura, ಮಾರ್ಚ್ 11 -- ಬಿಜಾಪುರ ಲಿಂಗಾಯತ ಅಭಿವೃದ್ದಿ ಶಿಕ್ಷಣ ಸಂಸ್ಥೆಯಿಂದ ಭಾರತೀಯ ಲಿಂಗಾಯಿತ ಶಿಕ್ಷಣ ಸಂಸ್ಥೆಯಾಗಿ ಬದಲಾಗಿರುವ ಬಿಎಲ್‌ಡಿಇ ಸಂಸ್ಥೆಯ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿ ಯುವ ನಾಯಕ ಬಿ.ಎಂ.ಪಾಟೀಲ್‌ ಅಧಿಕಾರ ವಹಿಸಿಕೊಂಡಿದ್ದಾರೆ.

ಸಚಿವರಾಗಿದ್ದ ದಿವಂಗತ ಬಿ.ಎಂ.ಪಾಟೀಲ ಅವರ ಮೊಮ್ಮಗ, ಹಾಲಿ ಸಚಿವ ಎಂ.ಬಿ.ಪಾಟೀಲ್‌ ಅವರ ಪುತ್ರರಾಗಿರುವ ಬಸನಗೌಡ ಎಂ. ಪಾಟೀಲ್‌ ಉನ್ನತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.

32 ವರ್ಷದ ಬಸನಗೌಡ ಎಂ ಪಾಟೀಲ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಜಿನಿವಾ ಸ್ಕೂಲ್ ಆಫ್ ಡಿಪ್ಲೊಮೆಸಿ ಇಂದ ಡಿಪ್ಲೋಮಾ ಇನ್ ಇಂಟರ್ ನ್ಯಾಶನಲ್ ರಿಲೇಶನ್‌ ಶಿಪ್‌ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ವಿಜಯಪುರ, ಬಾಗಲಕೋಟೆ ಭಾಗದಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಬಿಎಲ್‌ಡಿಇ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಹಲವು ಶಿಕ್ಷಣ ಕೋರ್ಸ್‌ಗಳನ್ನು ನಡೆಸುತ್ತಿದೆ.

ಬಿ.ಎಂ.ಪಾಟೀಲ ಅವರ ಅಧಿಕಾರ ಸ್ವೀಕಾರ ಸಮಾರಂಭದ ವೇಳೆ ಸಮಕುಲಾಧಿಪತಿ ಡಾ. ವೈ. ಎಂ.ಜಯರಾಜ, ...