ಭಾರತ, ಮಾರ್ಚ್ 17 -- Vijayapura News: ವಿಜಯಪುರದಿಂದ ಬಸವನಬಾಗೇವಾಡಿ ಕಡೆಗೆ ಹೋಗುವ ಮಾರ್ಗದ ಉಕ್ಕಲಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಉತ್ನಾಳ ಗ್ರಾಮದ ಬೀರಪ್ಪ, ಹನುಮಂತ ಹಾಗೂ ಯಮನಪ್ಪ ನಾಟೀಕರ ಎಂದು ಗುರುತಿಸಲಾಗಿದೆ. ಉಮೇಶ್‌ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಕಾರಿನಲ್ಲಿ ಹೊರಟಿದ್ದಾಗ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮುಂದೆ ಕುಳಿತಿದ್ದ ಇಬ್ಬರು ಹಾಗು ಹಿಂದೆ ಕುಳಿತಿದ್ದ ಒಬ್ಬಾತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬ ಮತ್ತೊಂದು ತುದಿಯಲ್ಲಿ ಕುಳಿತಿದ್ದರಿಂದ ಏಟು ಬಿದ್ದರೂ ಬದುಕುಳಿದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ವಿಜಯಪುರಿಂದ ಸುಮಾರು 15 ಕಿ.ಮಿ ದೂರದಲ್ಲಿರುವ ಉಕ್ಕಲಿ ಗ್ರಾಮದ ಹೆಗಡೆಹಾಳ ಗ್ರಾಮದ ವೃತ್ತದಲ್ಲ...