Vijayapura, ಏಪ್ರಿಲ್ 11 -- Vijayapur News: ವಿಜಯಪುರದಿಂದ ಸಿಂದಗಿ ದಾಟಿಕೊಂಡು ಕಲಬುರಗಿಗೆ ಹೋಗುವಾಗ ಜೇವರ್ಗಿಗೆ ಮುನ್ನ ಸಿಗುವ ಊರೇ ಗೋಲಗೇರಿ. ಶ್ರೀಶೈಲದ ಮಲ್ಲಯ್ಯನೇ ಒಂದು ರೂಪದಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬಂದು ನೆಲೆಸಿದ್ದರಿಂದ ಗೋಲಗೇರಿ ಭವ್ಯ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಚೈತ್ರ ಮಾಸದ ಹುಣ್ಣಿಮೆ ದಿನ (ಈ ಬಾರಿ ಏ.12ರ ಶನಿವಾರ) ಪ್ರತಿ ವರ್ಷ ಇಲ್ಲಿ ಭವ್ಯ ರಥೋತ್ಸವ ನಡೆಯುತ್ತದೆ. ಕ್ಷೇತ್ರದ ಮಹಿಮೆ : ಈ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಈ ಕ್ಷೇತ್ರ ಶ್ರೀಶೈಲ ಗಿರಿಯ ಪ್ರತಿರೂಪ ಎಂದೇ ಖ್ಯಾತವಾಗಿದೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಇಲ್ಲಿನ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುಟ್ಟ ಗ್ರಾಮ ಗೋಲಗೇರಿ. ಅಂದಾಜು 6 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ನೂರಾರು ವರ್ಷಗಳ ಹಿಂದೆ ಕುರಿ ದಡ್ಡಿಯಾಗಿತ್ತು. ಪಕ್ಕದ ಢವಳಾರ ಗ್ರಾಮದ ಬಲ್ಲುಗ-ದುಗ್ಗಳಾದೇವಿ ದಂಪತಿಗ...