ಭಾರತ, ಫೆಬ್ರವರಿ 14 -- Vijayanand OTT Release: ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಎಂಡಿ ಪದ್ಮಶ್ರೀ ಪುರಸ್ಕೃತ ವಿಜಯ್‌ ಸಂಕೇಶ್ವರ್‌ ಅವರ ಜೀವನ ಆಧಾರಿತ ಸಿನಿಮಾ ವಿಜಯಾನಂದ್.‌ 2022ರ ಡಿಸೆಂಬರ್ 9ರಂದು ಕನ್ನಡ ಮಾತ್ರವಲ್ಲದೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು ಈ ಸಿನಿಮಾ. ನವ ನಿರ್ದೇಶಕಿ ರಿಷಿಕಾ ಶರ್ಮಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. VRL ಫಿಲ್ಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ್ ಸಂಕೇಶ್ವರ್ ವಿಜಯಾನಂದ್‌ ಸಿನಿಮಾವನ್ನು ನಿರ್ಮಿಸಿದ್ದರು. ಚಿತ್ರಮಂದಿರಗಳಲ್ಲೂಈ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ ಇದೀಗ ಎರಡು ವರ್ಷಗಳ ಬಳಿಕ ಒಟಿಟಿಗೆ ಆಗಮಿಸಿದೆ.

ನಿಹಾಲ್ ರಜಪೂತ್‌, ಭರತ್ ಬೋಪಣ್ಣ, ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ವಿನಯ ಪ್ರಸಾದ್ ಮತ್ತು ಸಿರಿ ಪ್ರಹ್ಲಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿಜಯಾನಂದ್‌ ಸಿನಿಮಾ, 2022ರ ಡಿಸೆಂಬರ್‌ನಲ್ಲಿ ಬಿಡುಗಡೆ ಆದರೂ, ಒಟಿಟಿ ಅಂಗಳಕ್ಕೆ ಬಂದಿರಲಿಲ್ಲ. ವಿಜಯ್‌ ಸಂಕೇಶ್ವರ್‌ ಅವರ ಜೀವನವನ್...