Bengaluru, ಮಾರ್ಚ್ 9 -- Vijay Raghavendra: ನಟ ವಿಜಯ್‌ ರಾಘವೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳ ಶೂಟಿಂಗ್‌ ಮುಗಿಸಿದರೆ, ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿವೆ. ಆ ಪೈಕಿ ಇದೀಗ "ಅಭೇದ್ಯಂ" ಎಂಬ ಹೊಸ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯವಾಗಿದೆ. ಈಗಾಗಲೇ ವೀರ ಕಂಬಳ ಹೆಸರಿನ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಅರುಣ್‌ ರೈ ತೋಡಾರು, "ಅಭೇದ್ಯಂ" ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಅಭೇದ್ಯಂ ಚಿತ್ರವನ್ನು ಸಂದೀಪ್ ಬಾರಾಡಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಯುವಾ ಶೆಟ್ಟಿ ಚಿತ್ರಕಥೆ ಬರೆದು ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಯುವಾ ಶೆಟ್ಟಿ ಹಾಗೂ ಡಿಬಿಸಿ ಶೇಖರ್ ಸಂಭಾಷಣೆ ಬರೆದಿದ್ದಾರೆ.

ಭೇದಿಸಲಾಗದ್ದನ್ನು "ಅಭೇದ್ಯಂ" ಎನ್ನುತ್ತಾರೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.‌ ಬೆಂಗಳೂರು, ಮಂಗಳೂರು ...