Bengaluru, ಫೆಬ್ರವರಿ 5 -- Vijay Mallya: ತಲೆಮರೆಸಿಕೊಂಡ ಉದ್ಯಮಿ ವಿಜಯ್ ಮಲ್ಯ, ಮಿತಿಮೀರಿ ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕುಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಜಯ್ ಮಲ್ಯ ಪರವಾಗಿ ಹಿರಿಯ ನ್ಯಾಯವಾದಿ ಸಜನ್ ಪೂವಯ್ಯ ಅವರು ಈ ದಾವೆಯಲ್ಲಿ ವಾದ ಮಂಡಿಸುತ್ತಿದ್ದಾರೆ. ಸಾಲದ ಮೊತ್ತ ಮತ್ತು ವಸೂಲಿ ಮೊತ್ತಗಳ ಒಟ್ಟು ವಿವರಣೆ ನೀಡುವುದಕ್ಕೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಹೈಕೋರ್ಟ್‌ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಬ್ಯಾಂಕುಗಳಲ್ಲಿ ವಿಜಯ್ ಮಲ್ಯ ಅವರು ಮಾಡಿದ್ದ ಸಾಲ ಬಾಕಿ 6,200 ಕೋಟಿ ರೂಪಾಯಿ ಇತ್ತು. ಆದರೆ, ಬ್ಯಾಂಕುಗಳು 14,000 ಕೋಟಿ ರೂಪಾಯಿ ಸಾಲ ವಸೂಲಿ ಮಾಡಿವೆ. ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ವಿಜಯ್ ಮಲ್ಯ ಪರ ನ್ಯಾಯವಾದಿಗಳು, ಸಾಲ ಪೂರ್ತಿಯಾಗಿ ವಸೂಲಿಯಾಗಿದೆ. ಆದಾಗ್ಯೂ, ಸಾಲ ವಸೂಲಿ ಇನ್ನೂ ಮುಂದುವರಿದಿದೆ. ಹೀಗಾಗಿ, ಸಾಲದ ಮೊತ್ತ ಮತ್ತು ವಸೂಲಿಗೆ ಸಂಬಂಧಿಸಿ ಒಟ್ಟು ಮೊತ್ತದ ವಿವರಣೆ ನೀಡುವಂತೆ ಬ್ಯಾಂಕು...