ಭಾರತ, ಏಪ್ರಿಲ್ 11 -- Vidyapati Kannada Movie Review: 'ಟಗರು ಪಲ್ಯ' ಚಿತ್ರದ ನಂತರ ನಾಗಭೂಷಣ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿರಲಿಲ್ಲ. ಇದೀಗ ಅವರು 'ವಿದ್ಯಾಪತಿ'ಯಾಗಿ ಎರಡು ವರ್ಷಗಳ ನಂತರ ವಾಪಸ್ಸಾಗಿದ್ದಾರೆ. ಟ್ರೇಲರ್‍ನಲ್ಲೇ ಗಮನಸೆಳೆದಿದ್ದ ಈ ಚಿತ್ರ ಹೇಗಿದೆ? ತಿಳಿಯೋಣ ಬನ್ನಿ.

ಆತನ ಒಂದೇ ಒಂದು ಸಾಧನೆ ಎಂದರೆ ಸಿದ್ದು (ನಾಗಭೂಷಣ್‍), ಸೂಪರ್‍ ಸ್ಟಾರ್ ವಿದ್ಯಾಳ (ಮಲೈಕಾ ವಸುಪಾಲ್‍) ಗಂಡ. ಆಕೆಯ ಶ್ರೀಮಂತಿಕೆ, ಹೆಸರಿನಲ್ಲಿ ಮಜಾ ಮಾಡಿಕೊಂಡಿರುವ ಸಿದ್ದುಗೆ, ಅದೊಂದು ದಿನ ಜಗ್ಗು ('ಗರುಡ' ರಾಮ್‍') ಮತ್ತು ಗ್ಯಾಂಗ್‍ನಿಂದ ಸಾಕಷ್ಟು ಅವಮಾನವಾಗುತ್ತದೆ. ಹೆಂಡತಿ ಮನೆಯಿಂದ ಹೊರಗೆ ಬರುವ ಸಿದ್ದು, ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದಕ್ಕೆ ಹೋರಾಟಕ್ಕಿಳಿಯುತ್ತಾನೆ. ಈ ಹೋರಾಟದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು 'ವಿದ್ಯಾಪತಿ'ಯಲ್ಲಿ ತಮಾಷೆಯಾಗಿ ನಿರೂಪಿಸಲಾಗಿದೆ.

'ವಿದ್ಯಾಪತಿ' ಒಂದು ಪಕ್ಕಾ ಮನರಂಜನೆಯ ಚಿತ್ರ. ಇಲ್ಲಿ ಯಾವುದೇ ಸಾಮಾಜಿಕ ಕಳಕಳಿ, ಗಹನವಾದ ವಿಷಯಗಳು ಇಲ್ಲ. ಇಡೀ ಕುಟುಂಬ ಎರಡು ತಾ...