ಭಾರತ, ಫೆಬ್ರವರಿ 6 -- ಅಜಿತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ತಮಿಳು ಆಕ್ಷನ್ ಥ್ರಿಲ್ಲರ್ ಸಿನಿಮಾ ವಿಡಾಮುಯರ್ಚಿ ಇಂದು (ಫೆ 6) ಬಿಡುಗಡೆಯಾಗಿದೆ. ಮೊದಲ ದಿನದ ಮೊದಲ ಪ್ರದರ್ಶನವನ್ನೇ ನೋಡಬೇಕು ಎಂದು ಕಾದ ಅದೆಷ್ಟೋ ಅಭಿಮಾನಿಗಳು ಇಂದು ತಮ್ಮ ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ. ಚಿತ್ರಮಂದಿರಗಳೆದುರು ಅಜಿತ್ ಕುಮಾರ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಮಾಗಿಜ್ ತಿರುಮೇನಿ ನಿರ್ದೇಶನದ ಮತ್ತು ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದ ಈ ಸಿನಿಮಾ ಹೇಗಿದೆ ಎಂದು ಸಾಕಷ್ಟು ಜನರು ಕುತೂಹಲದಿಂದಿದ್ದಾರೆ.

ಅಜಿತ್ ಕುಮಾರ್ ಅಭಿನಯದ ಈ ಸಿನಿಮಾದಲ್ಲಿ ಅಜಿತ್ ಪಾತ್ರದ ಹೆಸರು ಅರ್ಜುನ್‌. ಅಜಿತ್ ಅವರ ಪತ್ನಿ ಪಾತ್ರದಲ್ಲಿ ತ್ರಿಶಾ ಅಭಿನಯಿಸಿದ್ದಾರೆ (ಕಾಯಲ್). ಅರ್ಜುನ್ ತನ್ನ ಪತ್ನಿಯನ್ನು ತುಂಬಾ ಪ್ರೀತಿಸುತ್ತಾ ಇರುತ್ತಾನೆ. ಆದರೆ ಕಷ್ಟಗಳು ಎದುರಾದಂತೆಲ್ಲ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡುತ್ತಾ ಹೋಗುತ್ತದೆ. ಅರ್ಜುನ್ ಪತ್ನಿಯನ್ನು ಅಪಹರಣ ಮಾಡುತ್ತಾರೆ. ಆ ನಂತರ ಅರ್ಜುನ್ ಅವಳನ್ನು ಬಿಡಿಸಿ...