ಭಾರತ, ಫೆಬ್ರವರಿ 6 -- ವಿಡಾಮುಯರ್ಚಿ ವಿಮರ್ಶೆ: ಥುನಿವು ಚಿತ್ರದ ನಂತರ ನಟ ಅಜಿತ್ ಅಭಿನಯದ ಸಿನಿಮಾ ಸುಮಾರು ಎರಡು ವರ್ಷಗಳ ನಂತರ ಇಂದು (ಫೆ 6) ಬಿಡುಗಡೆಯಾಗಿದೆ. ಮಗಿಜ್ ತಿರುಮೇನಿ ನಿರ್ದೇಶನದ ಈ ಚಿತ್ರದಲ್ಲಿ ತ್ರಿಷಾ, ಅರ್ಜುನ್, ರೆಜಿನಾ ಕಸಾಂಡ್ರಾ ಮತ್ತು ಆರವ್ ನಟಿಸಿದ್ದಾರೆ. ಛಾಯಾಗ್ರಾಹಕ ಓಂ ಪ್ರಕಾಶ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾ ಯಾವ ರೀತಿ ಮೂಡಿ ಬಂದಿದೆ ಎಂಬ ವಿವರ ಇಲ್ಲಿದೆ.

ಅರ್ಜುನ್ (ಅಜಿತ್) ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರ ಮತ್ತು ಕಾಯಲ್ (ತ್ರಿಷಾ) ನಡುವಿನ ಭೇಟಿಯು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ನಂತರ ಅವರಿಬ್ಬರೂ ಮದುವೆಯಾಗುತ್ತಾರೆ. ಆದರೆ ಕಾಯಲ್‌ಗೆ ಇನ್ನೊಬ್ಬ ಹುಡುಗ ಇಷ್ಟವಾಗುತ್ತಾನೆ. ಅವಳಿಗೆ ಇನ್ನೊಬ್ಬನ ಮೇಲೆ ಕ್ರಶ್ ಆಗುತ್ತದೆ. ಆಗ ಅವಳು ಅರ್ಜುನ್‌ಗೆ ವಿಚ್ಛೇದನ ನೀಡಲು ಬಯಸುತ್ತಾಳೆ. ಎಷ್ಟೇ ಪ್ರಯತ್ನಿಸಿದರೂ ಅವಳು ಅರ್ಜುನ್ ಜತೆ ಇರಲು ಒಪ್ಪುವುದಿಲ್ಲ, ನಂತರ ಅವರಿಬ್ಬರೂ ಒಂದು ಕೊನೆಯ ಪ್ರವಾಸಕ್ಕೆ ...