Bengaluru, ಫೆಬ್ರವರಿ 25 -- Vidaamuyarchi OTT: ತಮಿಳಿನ ಸ್ಟಾರ್ ಹೀರೋ ತಲಾ ಅಜಿತ್ ಕುಮಾರ್ ಅಭಿನಯದ ಆಕ್ಷನ್ ಥ್ರಿಲ್ಲರ್ ವಿದಾಮುಯಾರ್ಚಿ ಸಿನಿಮಾ ಒಟಿಟಿಗೆ ಬರುತ್ತಿದೆ. ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿರುವ ನೆಟ್‌ಫ್ಲಿಕ್ಸ್‌, ಸೋಮವಾರ (ಫೆಬ್ರವರಿ 24) ಸ್ಟ್ರೀಮಿಂಗ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದ ಒಂದೇ ತಿಂಗಳೊಳಗೆ ಒಟಿಟಿಗೆ ಆಗಮಿಸುತ್ತಿದೆ.

ವಿದಾಮುಯಾರ್ಚಿ ಸಿನಿಮಾ ಕನ್ನಡದಲ್ಲಿಯೂ ಅದೇ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ತರಲಾಯಿತು. ಮಾಯಿಲ್ ತಿರುಮೇನಿ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ತ್ರಿಷಾ ಕೃಷ್ಣನ್‌ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾ, ರೆಜಿನಾ ಕ್ಯಾಸಂಡ್ರ ಸೇರಿ ಇನ್ನೂ ಹಲವರು ನಟಿಸಿದ್ದಾರೆ. ಸಂಕ್ರಾಂತಿಗೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಫೆಬ್ರವರಿ 6ರಂದು ಬಿಡುಗಡೆಯಾಯಿತು. ಸಿನಿಮಾಕ್ಕೆ ಒಳ್ಳೆಯ ಓಪನಿಂಗ್‌ ಸಿಕ್ಕರೂ, ಕಲೆಕ್ಷನ್‌ ವಿಚಾರದಲ್ಲಿ ಸಿನಿಮಾ ಕೊಂಚ ಮಂಕಾಯಿತು. ಇದೀಗ ಇದೇ ಸಿನಿಮಾ ಒಟಿಟಿಯತ್ತ ಮುಖ ಮ...