ಭಾರತ, ಫೆಬ್ರವರಿ 6 -- ನಟ ಅಜಿತ್ ಕುಮಾರ್ 'ವಿಡಾಮುಯರ್ಚಿ' ಸಿನಿಮಾ ಇಂದು (ಫೆ 6) ರಂದು ಬಿಡುಗಡೆಯಾಗಿದೆ. ಸಿನಿಮಾ ಟ್ರೇಲರ್ ಬಿಡುಗಡೆಯಾಗಿ ಹಲವು ದಿನಗಳು ಕಳೆದ ನಂತರ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಈ ಸಿನಿಮಾದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿತ್ತು. ಚಿತ್ರಕ್ಕಾಗಿ ಉತ್ಸುಕರಾಗಿದ್ದ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಟೀಸರ್ ನೋಡಿದ ವೀಕ್ಷಕರು ಇದು ಯಾವ ಹಾಲಿವುಡ್ ಮೂವಿಗೂ ಕಡಿಮೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದು ಸಿನಿಮಾ ಬಗ್ಗೆಯೂ ಪಾಸಿಟಿವ್ ಟಾಕ್ ಇದೆ. ಲೈಕಾ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

ಮುಖ್ಯ ಭೂಮಿಕೆಯಲ್ಲಿರುವ ಅಜಿತ್ ಮತ್ತು ತ್ರಿಷಾ ಜೊತೆಗೆ ನೆಗೆಟಿವ್ ಪಾತ್ರಗಳಲ್ಲಿ ಅರ್ಜುನ್ ಸರ್ಜಾ ಮತ್ತು ರೆಜಿನಾ ಕೂಡ ಇದರಲ್ಲಿ ಅಭಿನಯಿಸಿದ್ದಾರೆ. ಮಾಗಿಜ್ ತಿರುಮೇನಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಅಭಿಮಾನಿಗಳಂತೂ ಮೊದಲ ದಿನದ ಮೊದಲ ಶೋ ನೋಡಲು ಕಾತರದಿಂದ ಸೇರಿದ್ದು, ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ ಜೋರಾಗಿದೆ.

ನಟ ಅಜ...