ಭಾರತ, ಮಾರ್ಚ್ 5 -- Vidaamuyarchi OTT:ಅಜಿತ್‌ ಕುಮಾರ್‌, ತ್ರಿಶಾ ಕೃಷ್ಣನ್ ನಟಿಸಿರುವ ವಿಡಾಮುಯರ್ಚಿ ಸಿನಿಮಾ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಅನೇಕ ರಹಸ್ಯ, ಕುತೂಹಲ, ನಿಗೂಢತೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಸಾಗುವ ಸಿನಿಮಾ. ಆರಂಭದಲ್ಲಿ ಮಧುರ ಪ್ರೇಮಕಥೆಯಂತೆ ನದಿಯ ನೀರಿನಂತೆ ಸಾಗುವ ಸಿನಿಮಾ ಬಳಿಕ ಆಕ್ಷನ್‌ ಟ್ರ್ಯಾಕ್‌ಗೆ ಮರಳುತ್ತದೆ. ಇದೇ ಸಿನಿಮಾದಲ್ಲಿ ಹೆಂಡತಿಯ ಒಂದು ಮೋಸ, ತಣ್ಣನೆಯ ಕ್ರೌರ್ಯ ಅಚ್ಚರಿ ಹುಟ್ಟಿಸುತ್ತದೆ.

ಈ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್‌ ಅವರು ಕಾಯಲ್‌ ಎಂಬ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಆಕೆಯ ಪತಿ ಅರ್ಜುನ್‌ (ಅಜಿತ್‌ ಕುಮಾರ್‌). ಈಕೆಗೆ ಪ್ರಕಾಶ್‌ ಎಂಬ ಲವರ್‌ ಇರುತ್ತಾನೆ. ಈತನಿಗಾಗಿ ಪತಿಗೆ ಡಿವೋರ್ಸ್‌ ನೀಡಲು ಬಯಸುತ್ತಾಳೆ. ಅರ್ಜುನ್‌ ಮತ್ತು ಕಾಯಲ್‌ ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ. ಆರಂಭದಲ್ಲಿ ಇರುವ ಅತೀವ ಪ್ರೀತಿ, ರೋಮಾನ್ಸ್‌ ಕಡಿಮೆಯಾಗಿದೆ. ಈಕೆಗೆ ಮಿಸ್‌ಕ್ಯಾರೇಜ್‌ ಆಗಿದೆ.

ನನಗೆ ಪ್ರಕಾಶ್‌ ಎಂಬ ವ್ಯಕ್ತಿಯ ಜತೆ ಸಂಬಂಧ ಇದೆ ...