ಭಾರತ, ಫೆಬ್ರವರಿ 6 -- Vidaamuyarchi Collection Prediction: ತಮಿಳು ನಟ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ ವಿಡಾಮುಯರ್ಚಿ ಸಿನಿಮಾ ಜಾಗತಿಕವಾಗಿ ಇಂದು (ಫೆ 6) ತೆರೆ ಕಂಡಿದ್ದು, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಬಗ್ಗೆ ಕುತೂಹಲ ಹೆಚ್ಚಿಸಿದೆ. ಮಾಗಿಜ್ ತಿರುಮೆನಿ ನಿರ್ದೇಶಿಸಿದ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಬಾಸ್ಕರನ್ ಅಲೀರಜಾ ನಿರ್ಮಿಸಿದ ಈ ಸಿನಿಮಾ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಬಹುತಾರಾಗಣದ ಈ ಸಿನಿಮಾದಲ್ಲಿ ಅಜಿತ್ ಕುಮಾರ್ ಮುಖ್ಯಪಾತ್ರದಲ್ಲಿದ್ದರೆ, ತ್ರಿಶಾ ಕೃಷ್ಣನ್‌, ಅರ್ಜುನ್ ಸರ್ಜಾ, ರೆಜಿನಾ ಕಾಸ್ಸಂಡ್ರಾ ಆರವ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಯಾಕ್ನಿಲ್ಕ್ ಬಿಡುಗಡೆ ಮಾಡಿದ ಅಡ್ವಾನ್ಸ್ ಬುಕಿಂಗ್ ಆದಾಯ ಡೇಟಾ ಪ್ರಕಾರ, ಮೊದಲ ದಿನದ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ 13.39 ಕೋಟಿ ರೂಪಾಯಿ ಗಳಿಸಿದೆ. ವಿಶೇಷವಾಗಿ ಈ ಮುಂಗಡ ಬುಕ್ಕಿಂಗ್ ತಮಿಳು ಭಾಷೆಯ ವಿಡಾಮುಯರ್ಚಿ ಸಿನಿಮಾದ್ದು. ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್...