ಭಾರತ, ಫೆಬ್ರವರಿ 14 -- ಕೀಮಾ ಎಂದಾಕ್ಷಣ ಮಟನ್‌ ನೆನಪಾಗುತ್ತೆ. ಆದರೆ ವೆಜ್‌ನಲ್ಲೂ ಕೀಮಾ ಮಾಡಬಹುದು. ಪಂಜಾಬಿ ಆಹಾರಗಳು ನಿಮಗೆ ಇಷ್ಟವಾದ್ರೆ, ಪಂಜಾಬಿ ಹೋಟೆಲ್‌ಗಳಲ್ಲಿ ತಿಂದಿದ್ರೆ ನಿಮಗೆ ವೆಜ್ ಕೀಮಾ ಮಸಾಲ ಪರಿಚಿತವಾಗಿರುತ್ತೆ. ವೆಜ್ ಕೀಮಾ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಯಾಕೆಂದರೆ ಇದರಲ್ಲಿ ಸಾಕಷ್ಟು ತರಕಾರಿಗಳನ್ನು ಸೇರಿಸಲಾಗುತ್ತದೆ.

ಮಟನ್ ಕೀಮಾ ಹಾಗೂ ಚಿಕನ್ ಕೀಮಾಕ್ಕಿಂತ ದುಪ್ಪಟ್ಟು ಪೋಷಕಾಂಶ ವೆಜ್‌ ಕೀಮಾದಿಂದ ದೊರೆಯುತ್ತದೆ. ಈ ಪಂಜಾಬಿ ಖಾದ್ಯವನ್ನು ಮನೆಯಲ್ಲೂ ಸುಲಭವಾಗಿ ಮಾಡಿಕೊಳ್ಳಬಹುದು. ಇದನ್ನು ಅನ್ನ, ರೋಟಿ, ಚಪಾತಿ ಜೊತೆ ತಿನ್ನಲು ಸಖತ್ ಆಗಿರುತ್ತೆ. ಹಾಗಾದರೆ ಇದನ್ನು ಮಾಡಲು ಏನೆಲ್ಲಾ ಬೇಕು, ಮಾಡೋದು ಹೇಗೆ ಎಂಬ ವಿವರ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ - ಅರ್ಧ ಕಪ್, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ‌- ಅರ್ಧ ಕಪ್‌, ಬೇಯಿಸಿದ ಫ್ರೆಂಚ್ ಬೀನ್ಸ್‌ - ಅರ್ಧ ಕಪ್‌, ಕ್ಯಾರೆಟ್ ಪ್ಯೂರಿ - ಅರ್ಧ ಕಪ್‌, ಬಟಾಣಿ - ಕಾಲು ಕಪ್‌, ಕೊತ್ತಂಬರಿ ಪುಡಿ - 1 ಚಮ...