Bengaluru, ಮಾರ್ಚ್ 3 -- ಸಾಲವು ವ್ಯಕ್ತಿಗೆ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನ ನಂತರವೂ ಸಾಲದಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ. ಹೆಚ್ಚುತ್ತಿರುವ ಸಾಲದ ಒತ್ತಡದಿಂದಾಗಿ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ವಾಸ್ತು ತಜ್ಞರ ಪ್ರಕಾರ ಜೀವನದಲ್ಲಿ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಸಾಲದಿಂದ ಮುಕ್ತರಾಗಲು ಇರುವ ಮಾರ್ಗೋಪಾಯಗಳನ್ನು ತಿಳಿಯೋಣ.

ವಾಸ್ತು ಪ್ರಕಾರ, ಕರ್ಪೂರವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಗಾಜಿನ ಬಟ್ಟಲಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರಕುತ್ತದೆ ಎಂದು ನಂಬಲಾಗಿದೆ.

ವಾಸ್ತು ಪ್ರಕಾರ, ಪ್ರತಿದಿನ ಕನಿಷ್ಠ ಒಂದು ಬಾರಿಯಾದರೂ ಊಟದ ಕೋಣೆಯಲ್ಲಿಯೇ ಊಟ ಮಾಡಬೇಕು. ಎಂದಿಗೂ ಆಹಾರವನ್ನು ಊಟದ ತಟ್ಟೆಯಲ್ಲಿ ಬಿಡಬಾರದು. ಅಂದರೆ ಆಹಾರವನ್ನು ವ್ಯರ್ಥ ಮಾಡಬಾರದು. ಹೀಗೆ ಮಾಡುವುದುರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಎಂಬ...