ಭಾರತ, ಫೆಬ್ರವರಿ 2 -- ವಾಸ್ತುಶಾಸ್ತ್ರವು ಮನೆಯ ಪ್ರತಿ ವಸ್ತು ಎಲ್ಲಿ, ಹೇಗಿರಬೇಕು ಎಂಬುದನ್ನು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವರು ವಾಸ್ತು ನಿಯಮಗಳನ್ನು ಪಾಲಿಸುತ್ತಾರೆ. ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಅದೃಷ್ಟವೂ ಜೊತೆಯಾಗುತ್ತದೆ.

ಮನೆ ಕಟ್ಟುವುದು ಮಾತ್ರವಲ್ಲ, ಮನೆಯಲ್ಲಿ ನಾವು ಇರಿಸುವ ವಸ್ತುಗಳನ್ನೂ ಕೂಡ ವಾಸ್ತು ನಿಯಮಗಳಿಗೆ ಅನುಸಾರವಾಗಿ ಇರಿಸಬೇಕು. ಪೀರೋಪಕರಣ ಸೇರಿ ಯಾವುದೇ ವಸ್ತುವಾಗಲಿ ವಾಸ್ತು ನಿಯಮಕ್ಕೆ ಸರಿಯಾಗಿ ಇರಿಸಿದರೆ ವಾಸ್ತುದೋಷಗಳು ಎದುರಾಗುವುದಿಲ್ಲ. ಕ್ಯಾಲೆಂಡರ್ ಇರಿಸಲು ಕೂಡ ಈ ವಾಸ್ತು ನಿಯಮ ಪಾಲನೆ ಮಾಡಬೇಕು. ನೀವು ಈಗಾಗಲೇ ಮನೆ ಗೋಡೆಯ ಮೇಲೆ 2025ರ ಹೊಸ ಕ್ಯಾಲೆಂಡರ್ ನೇತು ಹಾಕಿರಬಹುದು. ಆದರೆ ಹೆಚ್ಚಿನವರಿಗೆ ಕ್ಯಾಲೆಂಡರ್ ಎಲ್ಲಿ ಇರಿಸಬೇಕು ಎನ್ನುವ ತಿಳಿದಿರುವುದಿಲ್ಲ. ಆದರೆ ವಾಸ್ತು ನಿಯಮದಂತೆ ಕ್ಯಾಲೆಂಡರ್ ಇರಿಸುವುದರಿಂದ ಮನೆಯಲ್ಲಿ ಶಾಂತಿ, ಸಂತೋಷ ತುಂಬಿರುತ್ತದೆ.

ನಿಮ್ಮ ಮನೆಯಲ್ಲಿ ಕ್ಯಾಲೆಂಡರ್ ಇರಿಸಲು ವಾಸ್ತು ನ...