Bengaluru, ಮಾರ್ಚ್ 12 -- ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಆದರೆ ಕೆಲವು ನಿಯಮಗಳನ್ನು ನಿರ್ಲಕ್ಷಿಸುವುದು ತೊಂದರೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ಮಾಡುವಂತಹ ವಾಸ್ತು ನಿಯಮಗಳನ್ನು ಚಾಚೂತಪ್ಪದೇ ಪಾಲಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಅದರಿಂದ ಸಂಪತ್ತು, ಸಂತೋಷ ಹಾಗೂ ಸಮೃದ್ಧಿ ದೊರಕುತ್ತದೆ. ಹಾಗಾದರೆ ಆ ನಿಯಮಗಳೇನು ಎಂದು ತಿಳಿಯೋಣ.

ಅದೃಷ್ಟವು ಸದಾ ನಿಮಗೆ ಒಲಿಯುತ್ತಿರಬೇಕೆಂದರೆ ನೀವು ಯಾವಾಗಲೂ ಸೂರ್ಯೋದಯಕ್ಕೆ ಮುಂಚಿತವಾಗಿ ಹಾಸಿಗೆಯಿಂದ ಏಳಬೇಕು. ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಸಮಯದಲ್ಲಿ ಯಾರೂ ಮಲಗಿರಬಾರದು. ಹೀಗೆ ಮಾಡಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಹಾಗೂ ಸಂಪತ್ತು ನೆಲೆಸುತ್ತದೆ ಎಂದು ವಾಸ್ತು ಹೇಳುತ್ತದೆ.

ವಾಸ್ತು ದೋಷ ನಿವಾರಣೆಯಾಗಿ ಹಣಕಾಸಿನ ಲಾಭ ನಿಮ್ಮದಾಗಬೇಕೆಂದರೆ ಹಣ ಇಡುವ ಸ್ಥಳದಲ್ಲಿ ನ್ಯಾಯಾಲಯದ ಕಾಗದಪತ್ರಗಳನ್ನು ಮತ್ತು ಅದಕ್ಕೆ ಸಂಬಂಧ...