ಭಾರತ, ಫೆಬ್ರವರಿ 18 -- ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಕಷ್ಟ ನಷ್ಟಗಳು ಬಂದೇ ಬರುತ್ತದೆ. ಕುಟುಂಬ ಸದಸ್ಯರು ಸಮಸ್ಯೆಗೆ ಸಿಲುಕಿದಾಗ ಉಳಿದ ಸದಸ್ಯರು ಸಹಾಯ ಮಾಡುವುದು ಸಹಜ. ಆದರೆ ಕೆಲವೊಮ್ಮೆ ಕುಟುಂಬದ ಎಲ್ಲರೂ ತೊಂದರೆಗೆ ಸಿಲುಕುತ್ತಾರೆ. ಇಂತಹ ಸಂದರ್ಭದಲ್ಲಿ ವಾಸ್ತುವಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಕೆಲವೊಂದು ವಿಶೇಷ ಪೂಜೆಗಳಿಂದಲೂ ಶುಭಫಲಗಳನ್ನು ಪಡೆಯಬಹುದು. ಧಾರ್ಮಿಕ ವಿಧಿವಿಧಾನಗಳು ನಮ್ಮ ನೆರವಿಗೆ ಬರುತ್ತದೆ. ಮನೆಯ ನೆಮ್ಮದಿ ಕೆಡಿಸುವ, ಕುಟುಂಬದ ತೊಂದರೆಗೆ ಕಾರಣವಾಗುವ ವಿಚಾರದಲ್ಲಿ ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ಮತ್ತು ಸೂಕ್ತ ಪರಿಹಾರಗಳನ್ನು ತಿಳಿಯೋಣ.

ಮನೆಯಲ್ಲಿ ನಮ್ಮ ಹೆಬ್ಬೆರಳಿಗಿಂತಲೂ ಹೆಚ್ಚಿನ ಗಾತ್ರದ ದೇವರ ವಿಗ್ರಹಗಳಿದ್ದರೆ, ವಾರಕ್ಕೆ ಎರಡು ದಿನವಾದರೂ ಪೂಜೆಯನ್ನು ಸಲ್ಲಿಸಬೇಕು. ಇಲ್ಲದೆ ಹೋದಲ್ಲಿ ಕುಟುಂಬವನ್ನು ನಿರ್ವಹಿಸಲು ಅಗತ್ಯ ಇರುವಷ್ಟು ಆದಾಯ ದೊರೆಯುವುದಿಲ್ಲ. ಆದ್ದರಿಂದ ಮನೆಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವುದು ಬಹುಮುಖ್ಯ.

ಕುಟುಂಬದಲ್ಲಿರುವ ವಯೋವ...