Bengaluru, ಫೆಬ್ರವರಿ 24 -- ಹಿಂದೂ ಧರ್ಮದ ಎಲ್ಲಾ ಆಚರಣೆಗಳಲ್ಲಿ ಮದುವೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವಿವಾಹದ ಬಳಿಕ ನವದಂಪತಿಯ ಜೀವನ ಹೊಸದಾಗಿ ಪ್ರಾರಂಭವಾಗುತ್ತದೆ. ಆದ್ದರಿಂದ ಮದುವೆಗೆ ಸಂಬಂಧಿಸಿದ ಪ್ರತಿಯೊಂದು ರೀತಿ, ನೀತಿ, ಸಂಪ್ರದಾಯ ಹಾಗೂ ಪದ್ಧತಿಗಳನ್ನು ಬಹಳ ಎಚ್ಚರಿಕೆಯಿಂದ ಚಾಚೂತಪ್ಪದೇ ಅನುಸರಿಸಲಾಗುತ್ತದೆ. ಮದುವೆ ಎಂದರೆ ಅದೊಂದು ಸಂಭ್ರಮ, ಸಡಗರ. ಅಲ್ಲಿ ಬಂಧು ಬಳಗ, ಸ್ನೇಹಿತರು ಎಲ್ಲರ ಉಪಸ್ಥಿತಿಯಲ್ಲಿ ಹೊಸ ಜೀವನಕ್ಕೆ ಕಾಲಿಡುವ ಶುಭ ಸಮಯವಾಗಿರುತ್ತದೆ. ಮದುವೆಯ ಕಾರ್ಯಕ್ರಮಗಳು ಪ್ರಾರಂಭವಾಗುವುದು ಆಮಂತ್ರಣ ಪತ್ರಿಕೆ ಅಥವಾ ಲಗ್ನಪತ್ರಿಕೆಯಿಂದ. ಮದುವೆಗೆ ಜನರನ್ನು ಆಹ್ವಾನಿಸಲು ಅದನ್ನು ತಯಾರಿಸಲಾಗುತ್ತದೆ.

ಮದುವೆಯ ಕರೆಯೋಲೆಯನ್ನು ನೀಡಿ, ವಿವಾಹ ಶುಭ ಕಾರ್ಯಕ್ರಮಕ್ಕೆ ಬಂದು ನವದಂಪತಿಯನ್ನು ಆಶೀರ್ವದಿಸಿ ಎಂದು ಆಹ್ವಾನಿಸಲಾಗುತ್ತದೆ. ಇಂದಿನ ಫ್ಯಾಷನ್‌ ಯುಗದಲ್ಲಿ ಲಗ್ನಪತ್ರಿಕೆಯಲ್ಲಿ ನವನವೀನ ವಿನ್ಯಾಸಗಳನ್ನು ಕಾಣಬಹುದಾಗಿದೆ. ಆದರೆ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಮದುವೆಯ ಆಮಂತ್ರಣ ಪತ್ರಿಕೆಯಲ...