ಭಾರತ, ಫೆಬ್ರವರಿ 22 -- ಜೀವನದಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ ನೆಲೆಸಲು ನಮ್ಮ ದೈನಂದಿನ ದಿನಚರಿಯ ಕೆಲವು ಸಣ್ಣ ವಿಷಯಗಳ ಮೇಲೂ ವಿಶೇಷ ಗಮನ ಕೊಡುವುದು ಅಗತ್ಯ. ಆದರೆ ಕೆಲವೊಮ್ಮೆ ನಮಗೆ ಅರಿತೋ ಅರಿಯದೆಯೋ ನಮ್ಮ ಜೇಬಿನಲ್ಲಿ ನಾವು ಕೆಲವು ವಸ್ತುಗಳನ್ನು ಇರಿಸಿಕೊಂಡಿರುತ್ತೇವೆ. ಆದರೆ ಇದು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಆದರೆ ಕೆಲವು ವಸ್ತುಗಳು ನಮಗೆ ಶುಭಫಲವನ್ನು ನೀಡಬಹುದು.

ಹಾಗಾದರೆ ವಾಸ್ತುಪ್ರಕಾರ ಯಾವೆಲ್ಲಾ ವಸ್ತುಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವಂತಿಲ್ಲ, ಯಾವ ವಸ್ತುಗಳನ್ನು ಜೇಬಿನಲ್ಲಿ ಇರಿಸಿಕೊಂಡರೆ ಅಶುಭ ಫಲಗಳು ಎದುರಾಗುತ್ತವೆ ಎಂಬ ವಿವರ ಇಲ್ಲಿದೆ.

ವಾಸ್ತು ಪ್ರಕಾರ, ಜೇಬಿನಲ್ಲಿ ಹರಿದ ವಾಲೆಟ್ ಅನ್ನು ಎಂದಿಗೂ ಇಟ್ಟುಕೊಳ್ಳಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಹಣಕಾಸಿನ ವಿಷಯಕ್ಕೆ ಬಂದರೆ ಇದು ಆರ್ಥಿಕ ನಷ್ಟ ಅಥವಾ ಒತ್ತಡಕ್ಕೆ ಕಾರಣವಾಗಬಹುದು. ನಿಮ್ಮ ಬಳಿ ಸದಾ ದುಡ್ಡು, ಕಾಸು ಓಡಾಡುತ್ತಿರಬೇಕು ಎಂದರೆ ಹೊಸ ವಾಲೆಟ್ ಅಂದರೆ ಹರಿಯುವ ಮ...