ಭಾರತ, ಫೆಬ್ರವರಿ 2 -- Valentine's Week calendar 2025: ಪ್ರಪಂಚದಾದ್ಯಂತ ಪ್ರೇಮಿಗಳ ದಿನಾಚರಣೆಗೆ ಸಿದ್ಧತೆ ಶುರುವಾಗಿದೆ. ಪ್ರತಿ ವರ್ಷ ಫೆಬ್ರುವರಿ ತಿಂಗಳು ಬಂತೆಂದರೆ ಪ್ರೀತಿಸುತ್ತಿರುವವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ ಬಹಳ ವಿಶೇಷ. ಪ್ರೀತಿಯಲ್ಲಿ ಬಿದ್ದವರು ತಮ್ಮ ಮನದ ಭಾವನೆಗಳನ್ನು ಪ್ರೀತಿಸಿದ ವ್ಯಕ್ತಿಯ ಮುಂದೆ ಹೇಳಿಕೊಳ್ಳಲು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಪ್ರೇಮಿಗಳು ಪ್ರೇಮ ವ್ಯಾಖ್ಯಾನಕ್ಕೆ ಹೊಸ ಅರ್ಥ ಕೊಡಲು ವ್ಯಾಲೆಂಟೈನ್ಸ್‌ ಡೇಗಾಗಿ ಕಾಯುತ್ತಾರೆ.

ಪ್ರೇಮಿಗಳ ದಿನ ಎಂದರೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ, ಪ್ರೀತಿ ಮಾಡುವವರಿಗೆ ಪ್ರತಿ ದಿನವೂ ಪ್ರೇಮಿಗಳ ದಿನ ಅಂತೆಲ್ಲಾ ಹೇಳುವವರಲ್ಲೂ ಕೂಡ ಪ್ರೇಮಿಗಳ ದಿನ ಬಂದಾಗ ವಿಶೇಷ ಭಾವನೆಗಳು ಮೂಡುವುದು ಸುಳ್ಳಲ್ಲ. ಪ್ರೇಮಿಗಳ ದಿನವನ್ನು ಕೇವಲ 1 ದಿನ ಮಾತ್ರವಲ್ಲ, ಒಟ್ಟು 7 ದಿನಗಳ ಕಾಲ ಆಚರಿಸಲಾಗುತ್ತದೆ. ಫೆಬ್ರುವರಿ 7 ರಿಂದ ಆರಂಭವಾಗುವ ಪ್ರೇಮಿಗಳ ದಿನ ಫೆಬ್ರುವರಿ 14ರವರೆಗೆ ಮುಂದುವರಿಯುತ್ತದೆ.

ಪ್ರೇಮಿಗಳ ದಿನದ ಸಂದರ್ಭ ಒಂದು ದಿನಕ್ಕೂ ಒಂದೊಂದ...