Bengaluru, ಫೆಬ್ರವರಿ 5 -- ಪ್ರೇಮಿಗಳಿಗಾಗಿಯೇ ಒಂದು ದಿನವಿದೆ.. ಫೆಬ್ರವರಿ 14 ಬಂತೆಂದರೆ ಸಾಕು, ಕೆಂಪು ಬಣ್ಣದ ಗುಲಾಬಿ ಹಿಡಿದುಕೊಂಡು, ಕೈಕೈ ಹಿಡಿದು, ನಾವೇ ಸೂಪರ್ ಜೋಡಿ, ನಮ್ಮ ಪ್ರೀತಿಯೇ ದೊಡ್ಡದು ಎಂದು ಪೋಸ್ ಕೊಡುವ ಜನರಿಗೇನೂ ಕಡಿಮೆಯಿಲ್ಲ. ಕೆಲವರಿಗೆ ಪ್ರೀತಿಯೆಂದರೆ ಅದೊಂಥರಾ ಕಚಗುಳಿಯ ಅನುಭವ. ಇನ್ನು ಹೊಸದರಲ್ಲಿ ಪ್ರೇಮಿಯನ್ನು ಹೇಗೆ ಮೆಚ್ಚಿಸುವುದು, ಯಾವ ಉಡುಗೊರೆ ಕೊಡುವುದು ಎಂಬ ಆತಂಕ, ಗೊಂದಲ. ಅದರಲ್ಲೂ ಪ್ರೇಮಿಗಳ ದಿನದಂದು ಉಡುಗೊರೆ ಕೊಡುವುದು ಸಹಜವಾದ್ದರಿಂದ ಯಾವ ಉಡುಗೊರೆ ಕೊಡಲಿ, ಹೇಗೆ ಇರಲಿ, ಅದನ್ನು ಪ್ರೇಮಿ ಮೆಚ್ಚಬಹುದೇ ಎಂಬ ಆತಂಕ ಹೆಚ್ಚಾಗಿಯೇ ಇರುತ್ತದೆ. ಸರ್ಪ್ರೈಸ್ ಉಡುಗೊರೆ ನೋಡಿ ಖುಷಿಪಡುವ ಪ್ರೇಮಿಯ ಸಂತಸವನ್ನು ಆ ದಿನವನ್ನು ಖುಷಿಯನ್ನು ಕಳೆಯಲು ಪ್ರೇಮಿಗಳು ಯೋಜನೆ ರೂಪಿಸಿರುತ್ತಾರೆ.

ಪ್ರೇಮಿಗಳ ದಿನದಂದು ಹುಡುಗಿಯರಿಗೆ ಗಿಫ್ಟ್ ಕೊಡುವುದು ಒಂದು ಸವಾಲಿನ ಕೆಲಸವೇ ಸರಿ, ಯಾಕೆಂದರೆ, ಸರಳ ಮತ್ತು ಸಾಮಾನ್ಯ ಗಿಫ್ಟ್ ಆಗಿದ್ದರೆ, ಅವುಗಳನ್ನು ಅವರು ಮೆಚ್ಚುವುದಿಲ್ಲ.

ನೀವು ನಿಮ್ಮ ಜೀವನದಲ್...