Bengaluru, ಫೆಬ್ರವರಿ 13 -- ವ್ಯಾಲೆಂಟೈನ್ಸ್ ಡೇ ಶುಭಾಶಯಗಳು: ನಿಮ್ಮ ಪ್ರೀತಿಪಾತ್ರರಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ಕಳುಹಿಸಲು ಸುಂದರ ಸಂದೇಶಗಳಿಗಾಗಿ ಹುಡುಕುತ್ತಿದ್ದೀರಾ? ನಾವು ನಿಮಗಾಗಿ ಕೆಲವು ಸುಂದರ, ಹೃದಯಸ್ಪರ್ಶಿ ಸಂದೇಶಗಳನ್ನು ಹೊತ್ತು ತಂದಿದ್ದೇವೆ. ಇವುಗಳನ್ನು ಸಂದೇಶಗಳ ರೂಪದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಿ, ಅವರ ದಿನವನ್ನು ಇನ್ನಷ್ಟು ಸುಂದರವಾಗಿಸಿ.

ಪ್ರೇಮಿಗಳಿಗೆಂದೇ ಜಗತ್ತಿನಾದ್ಯಂತ ಆಚರಿಸುವ ದಿನವೊಂದಿದ್ದರೆ ಅದು ವ್ಯಾಲೆಂಟೈನ್ಸ್ ಡೇ. ಈ ದಿನ ನಿಮ್ಮ ಭಾವಿ ಸಂಗಾತಿ, ಪ್ರೇಮಿ, ಪತ್ನಿ, ಪತಿಗೆ ಈ ದಿನ ಶುಭಾಶಯಗಳ ಜೊತೆಗೆ ಅವರ ನೆಚ್ಚಿನ ಉಡುಗೊರೆಗಳನ್ನು ಕೊಡುವುದು ಅಭ್ಯಾಸ... ನೀವು ಕಳುಹಿಸುವ ಈ ಹೃದಯಸ್ಪರ್ಶಿ ಶುಭಾಶಯಗಳು ಅವರಿಗೆ ಖುಷಿಯನ್ನು ನೀಡುತ್ತದೆ. ಇತರರಂತೆ ಭಾವನೆಗಳನ್ನು ತುಂಬಿ ಸಂದೇಶ ಕಳುಹಿಸುವುದು ಹೇಗೆ ಎಂದು ನಿಮಗೆ ತಿಳಿದಿಲ್ಲವೇ? ನಿಮಗೆ ಸಹಾಯವಾಗಲೆಂದೇ ನಾವಿಲ್ಲಿ ಕೆಲವೊಂದು ಪ್ರೇಮ ಕವಿತೆಗಳು, ಪದಗಳನ್ನು ಸುಂದರವಾಗಿ ಪೋಣಿಸಿ ನೀಡಿದ್ದೇವೆ. ಚಾಕೊಲೇಟ್‌‌ಗಳು, ಗುಲಾ...