ಭಾರತ, ಫೆಬ್ರವರಿ 14 -- 'ಪ್ರೇಮಿಗಳ ದಿನ' ಎಂದ ಕೂಡಲೇ, ನಮ್ಮ ಮನದಾಳದಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್ ಆಲೋಚನೆಯೇ ಸ್ವಲ್ಪ ಜಾಸ್ತಿಯೆನಿಸುವಂತೆ ಬರುತ್ತದೆ. ಆದರೆ ಪ್ರೀತಿ ಎಂಬ ಪದ ತನ್ನದೇ ವಿಶಿಷ್ಟ, ಅನಂತ ಅರ್ಥ ನೀಡುತ್ತದೆ. ನಮ್ಮ ಸೃಷ್ಟಿಯ ಪ್ರಥಮ ಪ್ರೀತಿ ಕಥೆಯೇ ಶಿವ-ಪಾರ್ವತಿಯರ ಪ್ರಣಯದ-ಮದುವೆಯ ಕಥೆ. ಹಿಂಗೆಂದ ಕೂಡಲೇ ಈಗ ತಾನೇ ಪ್ರೌಢಾವಸ್ಥೆಗೆ ಬರುತ್ತಿರುವ ಯುವಕ-ಯುವತಿಯರು ಕೆಲವೊಮ್ಮೆ ಆಕರ್ಷಣೆಗೆ ಪ್ರೀತಿ-ಪ್ರೇಮ ಎಂದು ಹೆಸರಿಡುವರು. ಆದರೆ ಪ್ರೀತಿ ಎಂದರೆ ಅತ್ಯಂತ ಆಳ, ಅಸೀಮ, ಅರ್ಥ ಹೊಂದಿದೆ. ತಾಯಿ-ತಂದೆ-ಮಕ್ಕಳ, ಗುರು-ಶಿಷ್ಯರ, ಸಹೋದರತ್ವದ ಹೀಗೆ ಅನಂತ ಬಾಂಧವ್ಯಗಳಲ್ಲಿ ಪ್ರೀತಿ ನಿರಂತರ ಜೀವಸೆಲೆಯಂತೆ ಹರಿಯುತ್ತಿರುತ್ತದೆ. ಆದರೆ ಪ್ರೀತಿಗೆ ಮುಖ್ಯವಾಗಿ ಗಂಡು-ಹೆಣ್ಣು ಅನ್ನುವುದಕ್ಕಿಂತ ಗಂಡ-ಹೆಂಡತಿ ಎಂದರೆ ಪರಿಪೂರ್ಣ ಅರ್ಥ ನೀಡುವುದು.

ಅದಕ್ಕೆ ನಾವಿಂದು ಪ್ರೇಮಿಗಳ ದಿನದಂದು ಜಗದ ಮಾತಾ-ಪಿತೃಗಳಾದ ಶಂಕರ-ಪಾರ್ವತಿಯರ ಅನನ್ಯ ಪ್ರೀತಿಯ, ಅದಮ್ಯ ಚೇತನದ, ಅನ್ಯೋನ್ಯತೆಯ, ಆದರ್ಶ ದಂಪತಿಗಳ ಪ್ರತೀಕತೆಯನ್ನು ನೋಡ...