ಭಾರತ, ಫೆಬ್ರವರಿ 5 -- ಪ್ರೇಮಿಗಳ ದಿನಾಚರಣೆ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿವೆ. ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ವಿಭಿನ್ನ ರೀತಿಯಲ್ಲಿ ಮೆಚ್ಚಿಸಲು ಬಯಸುತ್ತಾರೆ. ಇದಕ್ಕಾಗಿ, ಉಡುಗೊರೆಗಳು, ಪ್ರವಾಸ ಇತ್ಯಾದಿ ಯೋಜಿಸುತ್ತಾರೆ. ನಿಮ್ಮ ಗೆಳೆಯ, ಗೆಳತಿ ಅಥವಾ ಸಂಗಾತಿ ಆಹಾರ ಪ್ರಿಯರಾಗಿದ್ದರೆ, ಈ ಖಾದ್ಯವನ್ನು ಮಾಡಿಕೊಡಬಹುದು. ಖಂಡಿತ ಸಂಗಾತಿ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಚಾಕೋಲೇಟ್, ಕೇಕ್ ಕೊಡುವುದು ಮಾಮೂಲಿ. ಪ್ರೀತಿ ಪಾತ್ರರಿಗಾಗಿ ರೋಸ್ ಮೊಮೊಸ್ ರೆಸಿಪಿ ಮಾಡಬಹುದು.

ಪ್ರೇಮಿಗಳ ದಿನಕ್ಕೆ ಗುಲಾಬಿ ಹೂವು ಕೊಡುವುದು ಸಾಮಾನ್ಯ. ಹೀಗಾಗಿ ಇದೇ ವಿಚಾರವನ್ನಿಟ್ಟುಕೊಂಡು ಮೊಮೊಸ್ ತಯಾರಿಸಬಹುದು. ಮೈದಾದಿಂದ ಮೊಮೊಸ್ ತಯಾರಿಸುವ ಬದಲು ಬೀಟ್ರೂಟ್‌ನಿಂದ ಆರೋಗ್ಯಕರ, ರುಚಿಕರವಾದ ಪಾಕವಿಧಾನ ಮಾಡಿ. ಬೀಟ್ರೂಟ್ ರೋಸ್/ಗುಲಾಬಿ ಮೊಮೊಸ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಬೀಟ್ರೂಟ್- 1, ಗೋಧಿ ಹಿಟ್ಟು- 1 ಕಪ್, ರವೆ- 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಪನೀರ್- ಅರ್ಧ ಕಪ್, ಕರಿಬೇವು...